ಬಸ್ಸಿನಲ್ಲಿ ಕೇಸರಿ ಧ್ವಜ: ವಿವಾದದ ಬಳಿಕ ತೆರವುಗೊಳಿಸಿ ಬಿಎಂಟಿಸಿ ಅಧಿಕಾರಿಗಳು

ಬೆಂಗಳೂರು: ಕೇಸರಿ ಧ್ವಜದಿಂದ ಅಲಂಕೃತಗೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ಸೊಂದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಧಿಕಾರಿಗಳು ಧ್ವಜವನ್ನು ತೆರವುಗೊಳಿಸಿದ್ದಾರೆ.
ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಬಸ್ಸಿನಲ್ಲಿರುವ ಧ್ವಜದ ಫೋಟೊ ಹಂಚಿಕೊಂಡಿದ್ದು, “#JUSTIN: @BMTC_BENGALURU ಹ್ಯಾಶ್ ಟ್ಯಾಗ್ ಜೊತೆಗೆ 'ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವಿಕೆ. ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಇತರ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ' ಎಂದು ಅವರು ಬರೆದುಕೊಂಡಿದ್ದಾರೆ.
"ಈ ಕುರಿತು ಬಸ್ ನಿರ್ವಾಹಕರಲ್ಲಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ" ಎಂದು ಪ್ರಯಾಣಿಕ ತನ್ನ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ 'ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಮಾಹಿತಿಗಾಗಿ ಫೋಟೋವನ್ನು ಹಂಚಿಕೊಂಡಿದ್ದೇವೆ' ಎಂದು ಬಿಎಂಟಿಸಿ ಅಧಿಕಾರಿಗಳು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
Action has been initiated. Updated photo shared for kind info pic.twitter.com/bkIIW6brCy
— BMTC (@BMTC_BENGALURU) December 31, 2021







