ಮಲ್ಪೆ-ಕರಾವಳಿ, ಪರ್ಕಳ-ಹೆಬ್ರಿ ರಸ್ತೆ ಚತುಷ್ಪಥಕ್ಕೆ 355.72 ಕೋಟಿ ರೂ.ಮಂಜೂರು: ನಿತಿನ್ ಗಡ್ಕರಿ
![ಮಲ್ಪೆ-ಕರಾವಳಿ, ಪರ್ಕಳ-ಹೆಬ್ರಿ ರಸ್ತೆ ಚತುಷ್ಪಥಕ್ಕೆ 355.72 ಕೋಟಿ ರೂ.ಮಂಜೂರು: ನಿತಿನ್ ಗಡ್ಕರಿ ಮಲ್ಪೆ-ಕರಾವಳಿ, ಪರ್ಕಳ-ಹೆಬ್ರಿ ರಸ್ತೆ ಚತುಷ್ಪಥಕ್ಕೆ 355.72 ಕೋಟಿ ರೂ.ಮಂಜೂರು: ನಿತಿನ್ ಗಡ್ಕರಿ](https://www.varthabharati.in/sites/default/files/images/articles/2021/12/31/319696-1640967392.png)
ನಿತಿನ್ ಗಡ್ಕರಿ
ಉಡುಪಿ, ಡಿ.31: ಬಹುಕಾಲದಿಂದ ನಿರೀಕ್ಷಿಸಲಾಗಿದ್ದು ಮಲ್ಪೆಯಿಂದ ಉಡುಪಿ ಕರಾವಳಿ ಬೈಪಾಲ್ ಹಾಗೂ ಪರ್ಕಳದಿಂದ ಹೆಬ್ರಿವರೆಗಿನ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥಗೊಳಿಸಲು 355.72 ಕೋಟಿ ರೂ.ವನ್ನು ಮಂಜೂರು ಗೊಳಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರ್ ತಿಳಿಸಿದ್ದಾರೆ.
ಈ ಕುರಿತು ಟ್ಪಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಗಡ್ಕರಿ, ತೀರ್ಥಹಳ್ಳಿ-ಉಡುಪಿಯಿಂದ ಮಲ್ಪೆವರೆಗಿನ ರಾ.ಹೆದ್ದಾರಿ ಅಗಲೀಕರಣದ ಭಾಗವಾಗಿ ಇದು ನಡೆಯಲಿದೆ ಎಂದು ವಿವರಿಸಿದ್ದಾರೆ.
Widening of existing Intermediate Lane to 4 Lane from Hebri to Parkala & from Karavali Junction to Malpe of Thirthahalli-Udupi-Malpe Section of NH-169A in the state of Karnataka has been sanctioned with budget of ₹ 355.72 Cr. #PragatiKaHighway @BSBommai @ShobhaBJP @BJP4Karnataka
— Nitin Gadkari (@nitin_gadkari) December 30, 2021
Next Story