ಮಾನಸಿಕ ಅಸ್ವಸ್ಥ ನಾಪತ್ತೆ
![ಮಾನಸಿಕ ಅಸ್ವಸ್ಥ ನಾಪತ್ತೆ ಮಾನಸಿಕ ಅಸ್ವಸ್ಥ ನಾಪತ್ತೆ](https://www.varthabharati.in/sites/default/files/images/articles/2021/12/31/319701-1640968433.jpg)
ಉಡುಪಿ, ಡಿ.31: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯಡ್ಕದ ಸದಾಶಿವ ಮೂಲ್ಯ (65) ಎಂಬವರು ಡಿ.26ರ ಸಂಜೆ ಸುಮಾರಿಗೆ ಮನೆಯಿಂದ ಹೊರಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಮರಾಠಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.
Next Story