ಗ್ರಾ.ಪಂ ಅಧ್ಯಕ್ಷನ 'ಸಹಿ' ನಕಲು ಆರೋಪ: ಪಿಡಿಒ ಅಮಾನತು

ರಾಯಚೂರು, ಜ. 2: ಅಧ್ಯಕ್ಷನ ಸಹಿಯನ್ನೇ ನಕಲು ಮಾಡಿ 60 ಲಕ್ಷ ರೂಪಾಯಿ ಕಬಳಿಸಲು ಯತ್ನಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯನ್ನು ಅಮಾನತು ಮಾಡಲಾಗಿದೆ.
ದೇವದುರ್ಗ ತಾಲೂಕಿನ ಮಲ್ಲೇದೇವರಗುಡ್ಡ ಗ್ರಾಮ ಪಂಚಾಯತಿಯ ಪಿಡಿಒ ಬಸವರಾಜ್ ನಾಯಕ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗ್ರಾ.ಪಂ ಅಧ್ಯಕ್ಷನಿಗೆ ಮಾಹಿತಿ ಇಲ್ಲದೆ ಹೆಚ್ಚುವರಿ ಕಾಮಗಾರಿಗೆ ಕ್ರಿಯಾಯೋಜನೆ ಮಾಡಲಾಗಿತ್ತು. ಹೆಚ್ಚುವರಿ ಕಾಮಗಾರಿಗೆ ಪಂಚಾಯತ್ ಸಿಬ್ಬಂದಿ ಸೇರಿ ಅಧ್ಯಕ್ಷರ ಸಹಿಯನ್ನು ಪಿಡಿಒ ನಕಲು ಮಾಡಿರುವ ಆರೋಪ ಕೇಳಿಬಂದಿತ್ತು.
ಹೆಚ್ಚುವರಿ ಕಾಮಗಾರಿ ಹೆಸರಲ್ಲಿ ಲಕ್ಷಾಂತರ ಹಣ ಲಪಟಾಯಿಸುವ ಹುನ್ನಾರ ಮಾಡಲಾಗಿದೆ ಎಂದು ಸ್ವತಃ ಗ್ರಾ.ಪಂ ಅಧ್ಯಕ್ಷರೇ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಒ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





