ಹಿಂದುತ್ವ, ಕಾರ್ಪೋರೇಟ್ ಯಜಮಾನಿಕೆ ದೇಶವನ್ನು ವಿನಾಶದತ್ತ ಸಾಗಿಸಿವೆ: ಪ್ರಕಾಶ ಕಾರಟ್

ಕೊಪ್ಪಳ, ಜ. 2: ಕೇಂದ್ರ ಸರಕಾರದ ಹಿಂದುತ್ವ ಮತ್ತು ಕಾರ್ಪೋರೇಟ್ ಯಜಮಾನಿಕೆಯ ಧೋರಣೆಗಳಿಂದಾಗಿ ದೇಶವು ವಿನಾಶದ ಅಂಚಿನತ್ತ ಸಾಗುತ್ತಿದೆ ಎಂದು ಸಿಪಿಎಂನ ಪೊಲಿಟ್ ಬ್ಯೂರೋ ಸದಸ್ಯ ಪ್ರಕಾಶ ಕಾರಟ್ ಆರೋಪಿಸಿದ್ದಾರೆ.
ರವಿವಾರ ಇಲ್ಲಿನ ಗಂಗಾವತಿಯಲ್ಲಿ ನಡೆದ ಪಕ್ಷದ 23ನೆ ರಾಜ್ಯ ಸಮ್ಮೇಳನದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರಕಾರವು ಮತೀಯ ಅಜೆಂಡಾಗಳನ್ನು ಜನರ ಮೇಲೆ ಬಲವಂತವಾಗಿ ಹೇರುತ್ತಿದೆ. ಅದಲ್ಲದೆ, ಅಭಿವೃದ್ಧಿಯ ಹೆಸರಿನಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದೆ. ಈ ಮೂಲಕ ಬಿಜೆಪಿ ಸರಕಾರವು ಕಾರ್ಪೋರೇಟ್ ಕಂಪೆನಿಗಳಿಗೆ ನೇರವಾಗಿ ಕಾಣಿಕೆ ನೀಡುತ್ತಿದೆ. ಇದರಿಂದ ರೈತ, ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದವರ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಜಗತ್ತು ಎರಡು ವರ್ಷಗಳಿಂದ ಕೊವೀಡ್ ಸೋಂಕಿಗೆ ಸಿಲುಕಿ ಬಳಲುತ್ತಿದೆ. ಅಮೆರಿಕಾ ಸೇರಿದಂತೆ ಬಂಡವಾಳಶಾಹಿ ದೇಶಗಳು ಸೋಂಕನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿವೆ. ಭಾರತವು ಇದರಿಂದ ಹೊರತೇನಲ್ಲ, ಏಕೆಂದರೆ ಅಲ್ಲಿ ಆರ್ಥಿಕ ಅಸಮಾನತೆ ಉಂಟಾಗಿದ್ದು, ಆರೋಗ್ಯವು ಸೇರಿದಂತೆ ಎಲ್ಲವೂ ಕಾರ್ಪೋರೆಟ್‍ಗಳ ಪಾಲಗಿವೆ ಎಂದ ಅವರು, ಸಮಾಜವಾದಿ ರಾಷ್ಟ್ರಗಳಾದ ಕ್ಯೂಬಾ, ವಿಯಾಟ್ನಾಮ್ ನಂತಹ ಚಿಕ್ಕ ರಾಷ್ಟ್ರಗಳು ಕೋವಿಡ್ ಸೋಂಕನ್ನು ಯಶಸ್ವಿಯಾಗಿ ತಡೆದಿವೆ ಎಂದು ತಿಳಿಸಿದರು.
.jpg)







