ಉಡುಪಿ: ನೈಟ್ ಕರ್ಫ್ಯೂ ಮಧ್ಯೆ ಮದುವೆ, ರಿಸೆಪ್ಷನ್‌ನಲ್ಲಿ ಕುಣಿತ; ಪ್ರಕರಣ ದಾಖಲು
ಉಡುಪಿ, ಜ.2: ಬಡಗುಬೆಟ್ಟು ಗ್ರಾಮದ ಪಣಿಯಾಡಿ ಎಂಬಲ್ಲಿ ಜ.1ರಂದು ಮಧ್ಯರಾತ್ರಿ ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಮದುವೆ ರಿಸೆಪ್ಷನ್ ಕಾರ್ಯ ಕ್ರಮದಲ್ಲಿ ಡಿಜೆ ಸೌಂಡ್ ಹಾಕಿ ಕುಣಿಯುತ್ತಿದ್ದ ಮದುಮಗ ಸೇರಿದಂತೆ ನಾಲ್ವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವರಾಮ್ ಶೆಟ್ಟಿಗಾರ್ ಎಂಬವರ ಮನೆಯಲ್ಲಿ ಅವರ ಮಗ ಧೀರಜ್ ಎಂಬವರ ಮದುವೆ ರಿಸೆಪ್ಷನ್ ಕಾರ್ಯಕ್ರಮದ ಅಂಗವಾಗಿ ಯಾವುದೇ ಪರವಾನಿಗೆ ಇಲ್ಲದೆ ರಾತ್ರಿ ಕರ್ಫ್ಯೂ ಆದೇಶ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಉಲ್ಲಂಘನೆ ಮಾಡಿ, ಅತೀ ಕರ್ಕಶವಾಗಿ ಡಿಜೆಸೌಂಡ್ ಹಾಕಿಕೊಂಡು, ನೃತ್ಯ ಮಾಡಿಕೊಂಡಿದ್ದರೆಂದು ದೂರಲಾಗಿದೆ. ಈ ಸಂಬಂಧ ಸ್ಥಳದಲ್ಲಿದ್ದ ಎರಡು ಡಿಜೆ ಸೌಂಡ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





