ಶಿವಮೊಗ್ಗದಲ್ಲಿ ಮುದ್ರಕರ ಹಬ್ಬ: ಪ್ರಿಂಟ್ ಇಲ್ಲದೇ ಅಭಿವ್ಯಕ್ತಿಯೇ ಗೌಣ; ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್

ಶಿವಮೊಗ್ಗ, ಜ.02: ಆಲೋಚನೆಗಳನ್ನು ಹೊರಹಾಕುವುದರಾದಿಯಾಗಿ ಯಾವುದೇ ಶುಭ ಸಂದರ್ಭಗಳಲ್ಲೂ ಮುದ್ರಣ ಬೇಕೇ ಬೇಕು. ಪ್ರಿಂಟ್ ಇಲ್ಲದೇ ಅಭಿವ್ಯಕ್ತಿ ಕಷ್ಟಸಾಧ್ಯ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲೆನಾಡು ಮುದ್ರಕರ ಸಂಘದಿಂದ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರವಿವಾರ ಆಯೋಜಿಸಿದ್ದ `ಮುದ್ರಕರ ಹಬ್ಬ'ದಲ್ಲಿ ಮಾತನಾಡಿದರು.
ಮುದ್ರಕರಿಲ್ಲದೇ ಏನನ್ನೂ ಊಹಿಸಿಕೊಳ್ಳುವುದೂ ಕಷ್ಟ. ವಿಚಾರಗಳು ಅಚ್ಚಾಗದ ಹೊರತು ಅಭಿವ್ಯಕ್ತ ಪಡಿಸಲಾಗದು. ಹೀಗಾಗಿ, ಇದು ಸಮಾಜದಲ್ಲಿ ಬಹುಮುಖ್ಯವಾದ ಸೇವೆಯಾಗಿದೆ ಎಂದು ಹೇಳಿದರು.
ಪಲಾಯನವಾಗದೇ ಉಳಿದುಕೊಂಡಿದ್ದೇ ಶ್ರೇಷ್ಠ: ಜಗತ್ತಿನಲ್ಲಿ ಆಗುತ್ತಿರುವ ವೈಜ್ಞಾನಿಕವಾಗಿ ಬದಲಾವಣೆಗಳಿಗೆ ಅನುಗುಣವಾಗಿ ಮುದ್ರಕರು ಅಪ್‍ಡೇಟ್ ಆಗಿದ್ದಾರೆ. ಮೊಳೆಯಿಂದ ಹಿಡಿದು ಟೈಪ್ ಮಾಡುವಷ್ಟರವರೆ ಶಕ್ತಿ ವಿನಿಯೋಗ. ತಮ್ಮ ಕೌಶಲವನ್ನು ತೋರಿಸಿದ್ದಾರೆ. ಕ್ಷೇತ್ರ ಎಷ್ಟೇ ಬದಲಾದರೂ ಅದಕ್ಕೆ ಒಗ್ಗಿಕೊಂಡಿದ್ದಾರೆಯೇ ವಿನಹ ಪಲಾಯನ ಮಾಡಿಲ್ಲ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಹೇಳಿದರು.
ಮುದ್ರಕರ ಇಡೀ ಕುಟುಂಬ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಹಲವು ಸಂಕಷ್ಟಗಳನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯವಾಗಿದೆ. ಮುಂದಿನ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆಂಬ ಪೂರ್ಣ ನಂಬಿಕೆ ಇದೆ. ಜೊತೆಗೆ, ಇವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳ ಕಡೆಗೂ ಗಮನಹರಿಸಲಾಗುವುದು. ಮುದ್ರಕರ ಒಳಿತಾಗಿ ಸದಾ ಇರುವುದಾಗಿ ಭರವಸೆ ನೀಡಿದರು.
ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್, ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್, ಕಾರ್ಯದರ್ಶಿ ಗಣೇಶ್ ಬೀಳಗಿ, ನಿರ್ದೇಶಕರಾದ ರಮೇಶ್, ಮಂಜುನಾಥ್, ಯೋಗೇಶ್, ಮುರುಳಿ, ಮೋಹನ್ ಚಂದ್ರು, ಸುರೇಶ್ ನಾಡಿಗ್ ಇತರರಿದ್ದರು.








