ಭಾರತದ ಡಿಸೆಂಬರ್ ನಿರುದ್ಯೋಗ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ: ಸಿಎಂಐಇ

ಹೊಸದಿಲ್ಲಿ: ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರದ(ಸಿಎಂಐಇ) ಅಂಕಿ-ಅಂಶಗಳು ಸೋಮವಾರ ಬಹಿರಂಗಪಡಿಸಿವೆ.
ನಿರುದ್ಯೋಗ ದರವು ನವೆಂಬರ್‌ನಲ್ಲಿ 7 ಶೇ. ರಿಂದ ಡಿಸೆಂಬರ್‌ನಲ್ಲಿ 7.9ಶೇ. ಕ್ಕೆ ಏರಿತು. ಇದು ಆಗಸ್ಟ್ ( 8.3 ಶೇ.)ಕ್ಕಿಂತ ಅತಿ ಹೆಚ್ಚು.
ಅನೇಕ ರಾಜ್ಯಗಳಲ್ಲಿ ಒಮೈಕ್ರಾನ್ ಕೊರೋನ ವೈರಸ್ ರೂಪಾಂತರ ಹಾಗೂ ಸುರಕ್ಷಿತ ಅಂತರ ನಿರ್ಬಂಧಗಳ ಪ್ರಕರಣಗಳ ಏರಿಕೆಯ ನಂತರ ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಗ್ರಾಹಕರ ಭಾವನೆಗೆ ಹೊಡೆತ ಬಿದ್ದಿದೆ.
ನಗರ ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿ 8.2 ಶೇ. ರಿಂದ ಡಿಸೆಂಬರ್‌ನಲ್ಲಿ 9.3 ಶೇ. ಕ್ಕೆ ಏರಿತು. ಆದರೆ ಗ್ರಾಮೀಣ ನಿರುದ್ಯೋಗ ದರವು 6.4 ಶೇ. ರಿಂದ 7.3 ಶೇ. ಹೆಚ್ಚಾಗಿದೆ ಎಂದು ಅಂಕಿ-ಅಂಶದಿಂದ ತಿಳಿದುಬಂದಿದೆ. .
ಓಮೈಕ್ರಾನ್ ರೂಪಾಂತರವು ಹಿಂದಿನ ತ್ರೈಮಾಸಿಕದಲ್ಲಿ ಕಂಡುಬಂದ ಆರ್ಥಿಕ ಚೇತರಿಕೆಯನ್ನು ಹಿಮ್ಮೆಟ್ಟಿಸಬಹುದು ಎಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರವು ಮಾಸಿಕ ಅಂಕಿ-ಅಂಶಗಳನ್ನು ಬಿಡುಗಡೆ ಮಾಡದ ಕಾರಣ ಮುಂಬೈ ಮೂಲದ ಸಿಎಂಐಇ ನಿರುದ್ಯೋಗದ ಡೇಟಾವನ್ನು ಅರ್ಥಶಾಸ್ತ್ರಜ್ಞರು ಹಾಗೂ ನೀತಿ ನಿರೂಪಕರು ಸೂಕ್ಷ್ಮವಾಗಿ ಗಮನಿಸುತ್ತಾರೆ.







