ವೇದಿಕೆಯಲ್ಲಿ ಸಚಿವ-ಸಂಸದರ ವಾಕ್ಸಮರ: ಸಿಎಂ ಬಳಿ ಕ್ಷಮೆಯಾಚಿಸಿದ ಡಿ.ಕೆ. ಸುರೇಶ್ ಹೇಳಿದ್ದೇನು?

ಸಿಎಂ ಎದುರಲ್ಲೇ ಸಚಿವ ಅಶ್ವತ್ಥನಾರಾಯಣ- ಸಂಸದ ಡಿಕೆ ಸುರೇಶ್ ಮಾತಿನ ಚಕಮಕಿ
ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಅಶ್ಚತ್ಥ ನಾರಾಯಣ- ಸಂಸದ ಡಿ.ಕೆ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆಗೆ ಸಂಬಂಧಿಸಿ ಸಂಸದ ಡಿ.ಕೆ. ಸುರೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಕ್ಷಮೆಯಾಚಿಸಿದ್ದಾರೆ.
ಘಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ''ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸುವೆ. ಆದರೆ, ಸಿಎಂ ಅವರಲ್ಲಿ ಮಾತ್ರ ಕ್ಷಮೆಯಾಚಿಸುವೆ'' ಎಂದು ಹೇಳಿದ್ದಾರೆ.
''ರಾಮನಗರ ಜಿಲ್ಲೆಯವರಿಗೆ ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾವು ಯಾರಿಗೂ ಹೆದರಿಕೊಳ್ಳುವ ಜನರಲ್ಲ'' ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ*.
Next Story





