'ರಾಮನಗರ ಕರ್ನಾಟಕದಲ್ಲಿ ಇದೆ ಎನ್ನುವುದು ಕಾಂಗ್ರೆಸ್ಸಿಗರಿಗೆ ನೆನಪಿರಲಿ': ನಳಿನ್ ಕುಮಾರ್ ಕಟೀಲ್ ತಿರುಗೇಟು
ವೇದಿಕೆಯಲ್ಲಿ ಸಚಿವ - ಸಂಸದರ ಜಟಾಪಟಿ ವಿಚಾರ

ಬೆಂಗಳೂರು: ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಅಶ್ಚತ್ಥ ನಾರಾಯಣ- ಸಂಸದ ಡಿ.ಕೆ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, ರಾಜ್ಯದ ಸಚಿವರಾದ ಅಶ್ವತ್ಥ ನಾರಾಯಣ ವೇದಿಕೆಯ ಮೇಲೆ ಭಾಷಣ ಮಾಡುವಾಗ ಅವರತ್ತ ಮುನ್ನುಗ್ಗಿ ಬಂದು ಗೂಂಡಾಗಿರಿ ಪ್ರದರ್ಶಿಸಿದ ಸಂಸದಡಿ.ಕೆ ಸುರೇಶ್ ಹಾಗೂ ಕಾಂಗ್ರೆಸ್ ಮುಖಂಡರ ವರ್ತನೆ ಖಂಡನೀಯ. ಇಂತಹ ರಾಜಕೀಯ ಸಂಸ್ಕ್ರತಿ ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
''ರಾಮನಗರ ಕರ್ನಾಟಕದಲ್ಲಿ ಇದೆ ಎನ್ನುವುದು ಕಾಂಗ್ರೆಸ್ಸಿಗರಿಗೆ ನೆನಪಿರಲಿ'' ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದ ಸಚಿವರಾದ @drashwathcn ವೇದಿಕೆಯ ಮೇಲೆ ಭಾಷಣ ಮಾಡುವಾಗ ಅವರತ್ತ ಮುನ್ನುಗ್ಗಿ ಬಂದು ಗೂಂಡಾಗಿರಿ ಪ್ರದರ್ಶಿಸಿದ ಸಂಸದ @DKSureshINC ಹಾಗೂ ಕಾಂಗ್ರೆಸ್ ಮುಖಂಡರ ವರ್ತನೆ ಖಂಡನೀಯ.
— Nalinkumar Kateel (@nalinkateel) January 3, 2022
ಇಂತಹ ರಾಜಕೀಯ ಸಂಸ್ಕ್ರತಿ ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲ.
ರಾಮನಗರ ಕರ್ನಾಟಕದಲ್ಲಿ ಇದೆ ಎನ್ನುವುದು ಕಾಂಗ್ರೆಸ್ಸಿಗರಿಗೆ ನೆನಪಿರಲಿ.







