ಐಸಿಸ್ ಸಂಪರ್ಕ ಶಂಕೆ : ಉಳ್ಳಾಲದ ಮಹಿಳೆ ಎನ್ಐಎ ಬಂಧನ

ಮಂಗಳೂರು, ಜ.3: ಐಸಿಸ್ ಸಂಘಟನೆಯ ಜೊತೆ ನಂಟು ಬೆಳೆಸಿದ ಶಂಕೆಯ ಮೇರೆಗೆ ಉಳ್ಳಾಲದ ದೀಪ್ತಿ ಮಾರ್ಲ ಯಾನೆ ಮರಿಯಂ ಎಂಬಾಕೆಯನ್ನು ಎನ್ಐಎ ಬಂಧಿಸಿದೆ.
ಉಳ್ಳಾಲದ ಮಾಸ್ತಿಕಟ್ಟೆಯ ಮನೆಯಿಂದ ಸೋಮವಾರ ಬೆಳಗ್ಗೆ ದೀಪ್ತಿ ಮಾರ್ಲ ಯಾನೆ ಮರಿಯಂ ನನ್ನು ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಹೋಗಿದೆ. ಈ ಮಧ್ಯೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಅಗಸ್ಟ್ 4ರಂದು ಎನ್ಐಎ ತಂಡ ಉಳ್ಳಾಲದ ಮನೆಯೊಂದಕ್ಕೆ ದಾಳಿ ನಡೆಸಿತ್ತು. ಎರಡು ದಿನಗಳ ಸತತ ವಿಚಾರಣೆಯ ಬಳಿಕ ಅಬ್ದುಲ್ ರಹ್ಮಾನ್ ಎಂಬಾತನನ್ನು ಬಂಧಿಸಿತ್ತು. ಈ ವೇಳೆ ದೀಪ್ತಿ ಯಾನೆ ಮರಿಯಂ ಮೇಲೆ ಎನ್ಐಎ ತಂಡವು ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ವಿಚಾರಣೆ ನಡೆಸಿ ಬಿಟ್ಟಿದ್ದ ಎನ್ಐಎ ತಂಡವು ಸೋಮವಾರ ಮತ್ತೆ ಮನೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದೆ.
ಎನ್ಐಎ ಡಿಎಸ್ಪಿ ಕೃಷ್ಣ ಕುಮಾರ್ ನೇತೃತ್ವದ ತಂಡದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ಸಿಂಗ್ ಮತ್ತು ಮೋನಿಕಾ ಧಿಕ್ವಾಲ್ ಮತ್ತಿತರರಿದ್ದರು.





