ಮರ್ಚಂಟ್ಸ್ ಟ್ರೋಫಿ ಫುಟ್ಬಾಲ್ ಪಂದ್ಯಾವಳಿ: ಸಂತ ಅಲೋಶಿಯಸ್ ಕಾಲೇಜ್ ಚಾಂಪಿಯನ್

ಮಂಗಳೂರು, ಜ.3: ಮರ್ಚಂಟ್ಸ್ ಪುಟ್ಬಾಲ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ನಗರದ ನೆಹರೂ ಮೈದಾನಿನ ಪುಟ್ಬಾಲ್ ಮೈದಾನಿನಲ್ಲಿ ಸತತ 11 ದಿನಗಳ ಕಾಲ 16 ತಂಡಗಳ ನಡುವೆ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜು ತಂಡವು ಆತಿಥೇಯ ಎಫ್‌ಸಿ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಟ್ರೋಫಿ ಗೆದ್ದು ಕೊಂಡಿತು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ದ.ಕ.ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಂ ಉದ್ಯಮಿ, ರಾಜ್ಯ ಫುಟ್ಬಾಲ್ ಆಟಗಾರ ಅಬ್ದುಲ್ಲ ಕೆ.ಬಾಲಕೃಷ್ಣ ಪೈ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಶಂಶುದ್ದೀನ್ ಬಂದರ್, ಜೀವನ್, ಫಯಾಝ್, ಹರಿಶ್ಚಂದ್ರ ಬೆಂಗರೆ, ಲತೀಫ್ ಕಸಬಾ, ಭಾಸ್ಕರ್ ಬೆಂಗ್ರೆ ಮತ್ತಿತರ ಗಣ್ಯದ ಸಮ್ಮುಖ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಲಾಯಿತು.
ದಿನೇಶ್ ಕರ್ಕೆರಾ ಪಂದ್ಯಾವಳಿಗಳು ನಡೆದು ಬಂದ ಬಗ್ಗೆ ವರದಿ ವಾಚಿಸಿದರು.
Next Story





