ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆರೋಪ : ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

ಉಡುಪಿ, ಜ.3: ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕಾನೂನು ಕ್ರಮ ಜರಗಿಸು ವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹರಿದ್ವಾರದ ಧರ್ಮ ಸಂಸತ್ ಸಭೆಯಲ್ಲಿ ಧ್ವೇಷ ಭಾಷಣ ಮಾಡಿರುವ ಮತೀಯ ನಾಯಕರ ವಿರುದ್ಧ ಗೂಂಡಾ ಕಾಯಿದೆ ಹಾಗೂ ಯುಎಪಿಎ ಕಾಯಿದೆಯಡಿ ಕೂಡಲೇ ಬಂಧಿಸಿ, ದೇಶದ ಐಕ್ಯತೆಯನ್ನು ರಕ್ಷಿಸಬೇಕು. ಸಮಾಜದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವಸಂಸದ ತೇಜಸ್ವಿ ಸೂರ್ಯ ಹೇಳಿಕೆ ಖಂಡನೀಯ. ಚರ್ಚ್ ಮತ್ತು ಧರ್ಮಗುರುಗಳ ಮೇಲೆ ದಾಳಿ ನಡೆ ಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇದನ್ನು ತಡೆಯಬೇಕು ಮತ್ತು ಚರ್ಚ್‌ಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯಿದೆಯನ್ನು ಕೈಬಿಡಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಮುಖಂಡರಾದ ಹಸನ್ ಮಣಿಪುರ, ಪ್ರಶಾಂತ್ ಜತ್ತನ್ನ, ಡೆರಿಕ್, ಮುಹಮ್ಮದ್ ಫಾರೂಕ್, ಅಶ್ಫಾಕ್ ಕಾರ್ಕಳ, ಮುಹಮ್ಮದ್ ಗುಲ್ವಾಡಿ, ಅಬೂಬಕ್ಕರ್ ಅಜ್ಜರಕಾಡು, ದಸ್ತಗಿರಿ ಕಂಡ್ಲೂರು, ರಹಿಮಾನ್ ಹೆಜಮಾಡಿ, ಯಾಸೀನ್, ಅಬ್ದುಲ್ ಕಾದರ್, ಹಸನ್, ಹಾರೂನ್ ರಶೀದ್, ನಝೀರ್ ಬಾರಕೂರು, ರೆಹಮತುಲ್ಲಾ ಹೂಡೆ ಮೊದಲಾದವರು ಉಸ್ಥಿತರಿದ್ದರು.





