ಸಾವಿತ್ರಿಬಾಯಿ ಅಕ್ಷರ ಕ್ರಾಂತಿ ಹುಟ್ಟು ಹಾಕಿದ ಮಹಿಳೆ: ಜಯನ್ ಮಲ್ಪೆ

ಮಲ್ಪೆ, ಜ.3: ಈ ದೇಶದ ಸಂಪ್ರದಾಯವಾದಿಗಳು ಹುಟ್ಟು ಹಾಕಿದ ದೇವರು, ಧರ್ಮ, ಮೂಢನಂಬಿಕೆ, ಅಸಮಾನತೆ, ಅಸ್ಪಶ್ಯತೆಯಂತಹ ಶೋಚನೀಯ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಕ್ಷರ ಕ್ರಾಂತಿ ಯನ್ನು ಹುಟ್ಟು ಹಾಕಿದ ಭಾರತದ ಮೊಟ್ಟಮೊದಲ ಅಕ್ಷರಮಾತೆ ಸಾವಿತ್ರಿಬಾಯಿ ಪುಲೆ ಎಂದು ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಸಾವಿತ್ರಿಬಾಯಿ ಪುಲೆಯವರ 191ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಹಿಂದೆ ಮಹಿಳೆ ಮನೆಯಿಂದ ಹೊರ ಹೋಗುವುದೇ ಅಪರಾಧ, ವಿದ್ಯೆ ಕಲಿಯುವುದೇ ಪಾಪದ ಕೆಲಸ, ಹೆಣ್ಣು ಸಬಲೆಯಲ್ಲ ಅಬಲೆ ಎನ್ನುವ ಆ ಕಾಲ ದಲ್ಲಿ ಸಾವಿತ್ರಬಾಯಿ ಪುಲೆ ನಡೆದ ದಾರಿಯೆಲ್ಲ ಕಲ್ಲು ಮುಳ್ಳು ಅಗ್ನಿಜ್ವಾಲೆಯ ಹಾದಿಯಾಗಿತ್ತು. ಆದರೂ ಸಾಮಾಜಿಕ ಕಟ್ಟುಪಾಡುಗಳಿಗೆ ಅಂಜದೆ ದಿಟ್ಟತನ ದಿಂದ ಹೆಣ್ಣುಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದ ಮಾಹಾಮಾತೆ ಎಂದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಯುವಸೇನೆಯ ಮಲ್ಪೆನಗರಾಧ್ಯಕ್ಷ ಕೃಷ್ಣ ಶ್ರೀಯಾನ್, ಯುವಸೇನೆ ಮುಖಂಡರಾದ ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು ಮಾತನಾಡಿದರು.
ದಲಿತ ಮುಖಂಡರಾದ ಮಂಜುನಾಥ ಕಪ್ಪೆಟ್ಟು, ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಪ್ರಸಾದ್ ಮಲ್ಪೆ, ಗುಣವಂತ ತೊಟ್ಟಂ, ರಾಮೋಜಿ ಅಮೀನ್, ಶಂಕರ್ ಕೋಟ್ಯಾನ್ ನೆರ್ಗಿ, ಅರುಣ್ ಸಾಲ್ಯಾನ್, ಸುಶೀಲ್ ಕುಮಾರ್ ಕೊಡವೊರು, ಲಕ್ಷ್ಮಣ ಬಲರಾಮನಗರ, ಸಂಜೀವ ಗುರಿಕಾರ, ಸುರೇಶ್ ಚಿಟ್ಪಾಡಿ, ಶಾರದ, ಸಂದ್ಯಾ ನೆರ್ಗಿ, ಮಂಗಳ ಹಾಗೂ ಸಂದಿನಿ ನೆರ್ಗಿ ಉಪಸ್ಥಿತರಿದ್ದರು.
ಸುಕೇಶ್ ಪುತ್ತೂರು ಸ್ವಾಗತಿಸಿದರು. ದೀಪಕ್ ಕೊಡವೊರು ವಂದಿಸಿದರು. ಅಶೋಕ್ ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು.







