ಬೋಟಿನಿಂದ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಜ.3: ಮೀನುಗಾರಿಕೆಗೆ ತೆರಳುತ್ತಿದ್ದ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ರೊಬ್ಬರು ಮೃತಪಟ್ಟ ಘಟನೆ ಮಲ್ಪೆಯ ಬಂದರಿನ ಅಳಿವೆ ಬಾಗಿಲು ಬಳಿ ಜ.2ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ವಿಠ್ಠಲ ತೋಕು ಖಾರ್ವಿ(49) ಎಂದು ಗುರುತಿಸಲಾಗಿದೆ. ಇವರು ಬೋಟಿನ ಹಿಂದುಗಡೆ ಬಲೆಯನ್ನು ಸರಿಪಡಿಸುತ್ತಿರುವ ವೇಳೆ ಆಯಾ ತಪ್ಪಿ ಧಕ್ಕೆಯ ನೀರಿಗೆ ಬಿದ್ದು ನಾಪತ್ತೆಯಾದರು. ಬಳಿಕ ಬಂದರಿನಿಂದ ಅಳಿವೆ ಬಾಗಿಲಿ ನಿಂದ ಸ್ವಲ್ಪದೂರದಲ್ಲಿ ಇವರ ಮೃತ ದೇಹ ಪತ್ತೆಯಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





