ಕಾಶಿಪಟ್ಣ: ದಾರುನ್ನೂರ್ ಎಜುಕೇಶನ್ ಸೆಂಟರ್ ನಲ್ಲಿ ಕೋವಿಡ್ ಲಸಿಕಾ ಅಭಿಯಾನ

ಕಾಶಿಪಟ್ಣ: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ವಿದ್ಯಾ ಸಂಸ್ಥೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಸೋಮವಾರ ನಡೆಯಿತು.
15 ರಿಂದ 18 ವರ್ಷದೊಳಗಿನ ಸುಮಾರು 102 ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ಇಂದು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಿತಾ ದಾದಿಯರು ಗಳಾದ ಸೌಮ್ಯ,ಉಷಾ, ಇಂಪಾಲ ಆಶಾ ಕಾರ್ಯಕರ್ತೆಯರಾದ ಜಯಂತಿ, ಪ್ರೇಮ, ಮಂಜುಳಾ ಸಂಸ್ಥೆಯ ಪ್ರಾಂಶುಪಾಲರಾದ ಆಮೀನ್ ಹುದವಿ ವ್ಯವಸ್ಥಾಪಕರಾದ ಅಬ್ದುಲ್ ಹಕೀಂ,ಅಬ್ದುಲ್ ರಶೀದ್ ಹುದವಿ ಉಪಸ್ಥಿತರಿದ್ದರು.
Next Story




.jpeg)


