ಫರಾರಿ ಮಸ್ಜಿದ್ ಎ ಆಝಾಮ್ ನಲ್ಲಿ ದ್ಸಿಕ್ರ್ ಮಜ್ಲಿಸ್

ಬಂಟ್ವಾಳ : ತಾಲೂಕಿನ ಇರ್ವತ್ತೂರುಪದವು ಗ್ರಾಮದ ಮಸ್ಜಿದ್ ಎ ಆಝಾಮ್ ಫರಾರಿ ಮತ್ತು ಅಲ್ ಹುದಾಃ ಯಂಗ್ ಮೆನ್ಸ್ ಫರಾರಿ ಇದರ ಜಂಟಿ ಆಶ್ರಯದಲ್ಲಿ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ದ್ಸಿಕ್ರ್ ಮಜ್ಲಿಸ್ ನೇತೃತ್ವವನ್ನು ಅಲ್ ಖಾದಿಸ್ ಕಾವಳಕಟ್ಟೆ ಇದರ ಚೇರ್ ಮ್ಯಾನ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ವಹಿಸಿದ್ದರು. ಬೆಳ್ತಂಗಡಿ ಸಂಯುಕ್ತ ಜಮಾತ್ ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾ-ಅಲವಿ ದುವಾ ಆಶೀರ್ವಚನಗೈದರು.
ಮಸ್ಜಿದ್ ಎ ಆಝಾಮ್ ಫರಾರಿ ಇದರ ಇಮಾಮ್ ಮುಹಮ್ಮದ್ ಮುಹ್ಸಿನ್ ರಝಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸ್ಜಿದ್ ಎ ಆಝಾಮ್ ಫರಾರಿ ಇದರ ಅಧ್ಯಕ್ಷ ರಹ್ಮತುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಇರ್ವತ್ತೂರು ಪದವು ಬಿ.ಜೆ.ಎಂ. ಖತೀಬ್ ಉಮರ್ ಮದನಿ, ಮಾವಿನಕಟ್ಟೆ ಬಿಜೆಎಂ ಖತೀಬ್ ಅಬ್ದುಲ್ ಅಝೀಝ್ ಅಮ್ಜದಿ, ಕಲಾಬಾಗಿಲು ಕಮರುಲ್ ಇಸ್ಲಾಂ ಮಸ್ಜಿದ್ ಮತ್ತು ಮದ್ರಸದ ಇಮಾಮ್ ಅಹ್ಮದ್ ರಝಾ, ಆಲದಪದವು ಮಸ್ಜಿದ್ ಇಮಾಂ ಅಬ್ದುರ್ರಹ್ಮಾನ್ ಹುಮೈದಿ, ಮಸ್ಜಿದ್ ಎ ಆಝಾಮ್ ಫರಾರಿ ಮುಅಲ್ಲಿಂ ಶರೀಕ್ ಆಲಂ, ಫರಾರಿ ಮಸ್ಜಿದ್ ಎ ಆಝಾಮ್ ಉಪಾಧ್ಯಕ್ಷ ನಝೀರ್ ಸಾಹೆಬ್, ಇರ್ವತ್ತೂರುಪದವು ಬಿಜೆಎಂ ಸೇವಕ ಎಸ್.ಪಿ ರಫೀಕ್, ಮಾವಿನಕಟ್ಟೆ ಬಿಜೆಎಂ ಅಧ್ಯಕ್ಷ ಅಬ್ದುಲ್ ರಝಾಕ್, ಕಲಾಬಾಗಿಲು ಕಮರುಲ್ ಇಸ್ಲಾಂ ಮಸ್ಜಿದ್ ಮತ್ತು ಮದ್ರಸ ಅಧ್ಯಕ್ಷ ರಶೀದ್ ನೇರಳಕಟ್ಟೆ, ಆಲದಪದವು ಮಸ್ಜಿದ್ ಅಧ್ಯಕ್ಷ ಹಂಝ ಬಸ್ತಿಕೋಡಿ, ಇರ್ವತ್ತೂರುಪದವು ಫರಾರಿ ಅಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಎಸ್.ಎಂ.ವಸೀಮ್ ಭಾಗವಹಿಸಿದರು.
ಎಸ್.ಪಿ.ರಹಿಮಾನ್ ಇರ್ವತ್ತೂರುಪದವು ಪ್ರಾಸ್ತಾವಿಸಿ ಸ್ವಾಗತಿಸಿದರು. ಅಝರ್ ಪಂಜೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







