ಬೆಂಗಳೂರು: ಕಳವು ಆಗಿದ್ದ ಕಾರು ಫಾಸ್ಟ್ಯಾಗ್ ನಿಂದ ಪತ್ತೆ!

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.4: ಕಳ್ಳತನವಾಗಿದ್ದ ಕಾರು ಫಾಸ್ಟ್ ಟ್ಯಾಗ್ ಸಹಾಯದಿಂದ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಚ್ಎಸ್ಆರ್ ಲೇಔಟ್ನ ಉದ್ಯಮಿ ಶ್ರೀನಿವಾಸರೆಡ್ಡಿ ಎಂಬವರ ಕಾರನ್ನು ಡಿ.28ರಂದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಆದರೆ, ಈ ಕಾರು ಇದೀಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಆಗಿದೆ.
ಟೋಲ್ ಪಾಸ್ ಆಗುವ ವೇಳೆ ಕಾರಿನ ಮಾಲಕನಿಗೆ ಬಂದ ಸಂದೇಶದಿಂದ ಕಾರು ಪತ್ತೆ ಆಗಿದೆ. ಸದ್ಯ ಪೊಲೀಸರು ಹುಬ್ಬಳ್ಳಿಯಿಂದ ಕಾರು ತಂದು ಮಾಲಕರಿಗೆ ಹಿಂದಿರುಗಿಸಿದ್ದಾರೆ.
ಕಾರು ಪತ್ತೆಯಾದರೂ ದುಷ್ಕರ್ಮಿಯ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದ್ದು, ಈ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





