ದ್ವಿತೀಯ ಟೆಸ್ಟ್: ಶಾರ್ದೂಲ್ ಮಾರಕ ಬೌಲಿಂಗ್ ದಾಳಿ, ದಕ್ಷಿಣ ಆಫ್ರಿಕಾ 229 ರನ್‌ಗೆ ಆಲೌಟ್

ಜೋಹಾನ್ಸ್‌ಬರ್ಗ್, ಜ.4: ವೇಗದ ಬೌಲರ್ ಶಾರ್ದೂಲ್ ಠಾಕೂರ್(7-61) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 229 ರನ್ ಗಳಿಸಿ ಆಲೌಟಾಗಿದೆ. 27 ರನ್ ಅಲ್ಪ ಮುನ್ನಡೆ ಪಡೆದಿದೆ.
ಭಾರತದ ಮೊದಲ ಇನಿಂಗ್ಸ್ ಮೊತ್ತ 202 ರನ್‌ಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 79.4 ಓವರ್‌ಗಳಲ್ಲಿ 229 ರನ್‌ಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾದ ಪರ ಕೀಗನ್ ಪೀಟರ್ಸನ್(62, 118 ಎಸೆತ, 9 ಬೌಂಡರಿ) ಸರ್ವಾಧಿಕ ಸ್ಕೋರ್ ಗಳಿಸಿದರು. ಟೆಂಬ ಬವುಮಾ(51, 60 ಎಸೆತ, 6 ಬೌಂಡರಿ)ಅರ್ಧಶತಕ ಸಿಡಿಸಿದರು.
ಶಾರ್ದೂಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದು, ಜೀವನಶ್ರೇಷ್ಠ ಬೌಲಿಂಗ್ ಮೂಲಕ ಗಮನ ಸೆಳೆದರು.
Next Story