ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ

ಶರಣ್ಯ ನಾಯಕ್
ಉಡುಪಿ, ಜ.4: ನೆಹರು ಯುವ ಕೇಂದ್ರ ಆಯೋಜಿಸಿದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ವಿಷಯದ ಕುರಿತ ರಾಜ್ಯ ಮಟ್ಟದ ಇಂಗ್ಲೀಷ್ ಭಾಷೆಯ ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಟಿ. ಶರಣ್ಯ ನಾಯಕ್ ಪ್ರಥಮ ಸ್ಥಾನ ದೊಂದಿಗೆ 25,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.
ಇವರು ಈ ತಿಂಗಳು ನಡೆಯುವ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
Next Story





