ಗುರುಪುರ: ಅಪಘಾತದಿಂದ ಗಾಯಗೊಂಡಿದ್ದ ಮಹಿಳೆ ಮೃತ್ಯು
ಮಂಗಳೂರು, ಜ.4: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗುರುಪುರ ಬಳಿ ಡಿ.30ರಂದು ರಾತ್ರಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಕೃಷ್ಣಾಪುರ ಸಮೀಪದ ಚೊಕ್ಕಬೆಟ್ಟುವಿನ ಅಬ್ದುಲ್ ರಶೀದ್‌ರ ಪತ್ನಿ ಸಫಿಯಾ ಬಾನು ಮೃತಪಟ್ಟ ಮಹಿಳೆ.
ಮಂಗಳೂರು ಕಡೆಗೆ ಅಮಿತ ವೇಗದಿಂದ ಚಲಿಸುತ್ತಿದ್ದ ಇನ್ನೋವಾ ಕಾರೊಂದು ವಿರುದ್ಧ ದಿಕ್ಕಿನಿಂದ ಗುರುಪುರದತ್ತ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ವಿಫ್ಟ್ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿತ್ತು. ಆ ಪೈಕಿ ಸಫಿಯಾ ಭಾನು ಅವರ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
Next Story





