ಜಿಲ್ಲಾ ರಂಗಮಂದಿರ ನಿರ್ಮಿಸಲು ಮನವಿ

ಮಂಗಳೂರು, ಜ.4: ದ.ಕ. ಜಿಲ್ಲಾ ರಂಗಮಂದಿರ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ‘ಮಂಗಳೂರು ರಂಗಭೂಮಿ’ ಮತ್ತು ರಂಗಮಂದಿರ ಹೋರಾಟ ಸಮಿತಿಯ ವತಿಯಿಂದ ಸಚಿವ ಸುನೀಲ್ ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾರಿಗೂ ಪ್ರತ್ಯೇಕ ಮನವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರಿನ ಸಹಾಯಕ ನಿರ್ದೇಶಕ ರಾಜೇಶ್‌ರ ಮೂಲಕ ಸಲ್ಲಿಸಲಾಯಿತು.
ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲ.ಕಿಶೋರ್ ಡಿ ಶೆಟ್ಟಿ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಸಮಿತಿಯ ಅಧ್ಯಕ್ಷ ಶಶಿರಾಜ್ ಕಾವೂರು, ಪ್ರಧಾನ ಕಾರ್ಯದರ್ಶಿ ಜಗನ್ ಪವಾರ್ ಬೇಕಲ್ ನೇತೃತ್ವ ವಹಿಸಿದ್ದ ನಿಯೋಗದಲ್ಲಿ ಕಾಟ್ಕಾ ಅಧ್ಯಕ್ಷ ಮೋಹನ ಕೊಪ್ಪಳ, ಹೋರಾಟ ಸಮಿತಿಯ ಸದಸ್ಯರಾದ ಪ್ರಕಾಶ್ ಶೆಣೈ, ರಾಕೇಶ್ ಹೊಸಬೆಟ್ಟು, ವಿನಾಯಕ ಜೆಪ್ಪು, ಯಾದವ ಮಣ್ಣಗುಡ್ಡೆ, ನಾಗೇಶ್ ಶೆಟ್ಟಿ ಬಜಾಲ್, ಪ್ರಜ್ವಲ್ ಅತ್ತಾವರ, ರಂಜನ್ ಬೋಳೂರು ಮತ್ತಿತರರಿದ್ದರು.
Next Story





