ತುಳು ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಜ.4: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು 2021ನೆ ಸಾಲಿನ ಗೌರವ ಪ್ರಶಸ್ತಿ ಮತ್ತು ತುಳು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ.
ತುಳು ಭಾಷೆ, ಸಾಹಿತ್ಯ ಸಂಶೋಧನೆಗಳ ಕ್ಷೇತ್ರ, ತುಳು ನಾಟಕ-ಚಲನಚಿತ್ರ ಕ್ಷೇತ್ರದಲ್ಲಿ ಸಾಹಿತಿ ಅಥವಾ ಕಲಾವಿದ, ತುಳು ಜಾನಪದ ಕ್ಷೇತ್ರದಲ್ಲಿ (ಜಾನಪದ ಕುಣಿತ, ಪಾಡ್ದನ, ದೈವನರ್ತನ) ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಪರಿಗಣಿಸಿ ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ ಮೂವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
ಈ ಸಂದರ್ಭ ವಿಶೇಷವಾಗಿ ಸೇವೆ ಸಲ್ಲಿಸಿರುವ ಬಾಲ ಪ್ರತಿಭೆ, ಯುವ ಸಾಧಕ, ಸಂಘಟನೆ (ಬಿರ್ಸೆ ಬಾಲೆ ತಮ್ಮನ, ಬಿರ್ಸೆ ಜವನೆರೆ ತಮ್ಮನ, ಬಿರ್ಸೆ ಕೂಟ ತಮ್ಮನ)ಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅರ್ಜಿಗಳನ್ನು ಸ್ವತ: ಅಭ್ಯರ್ಥಿಗಳೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸು ಮಾಡಿ ಅರ್ಜಿ ಸಲ್ಲಿಸಬಹುದು.
ಈ ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗದ ಮಹನೀಯರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗು ವುದು. ಅವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಆದರೆ ಸಾಧನೆಯ ಪೂರಕ ವಿವರಗಳಿದ್ದಲ್ಲಿ ಕಳುಹಿಸಿಕೊಡಬ ಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿಗಳನ್ನು ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಗಳೊಂದಿಗೆ ಅಕಾಡಮಿಗೆ ಕಳುಹಿಸಿ ಕೊಡಬಹುದು.
ಪುಸ್ತಕ ಬಹುಮಾನ 2021: 2021ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಕಟಗೊಂಡ ಪುಸ್ತಕಗಳನ್ನು (ತುಳು ಕವನ ಸಂಕಲನ, ತುಳು ಕಥಾ ಸಂಕಲನ, ತುಳು ಕಾದಂಬರಿ, ತುಳು ಕಾವ್ಯ, ತುಳು ನಾಟಕ, ತುಳುವಿನ ಬಗ್ಗೆ ಅಧ್ಯಯನ ಗ್ರಂಥ ಹಾಗೂ ತುಳುವಿನಿಂದ ಇತರ ಭಾಷೆಗೆ ಅಥವಾ ಇತರ ಭಾಷೆಯಿಂದ ತುಳುವಿಗೆ ಭಾಷಾಂತರಿತ ಕೃತಿಗಳನ್ನು) ಲೇಖಕರು/ಪ್ರಕಾಶಕರು ತಲಾ ನಾಲ್ಕು ಪ್ರತಿಯೊಂದಿಗೆ ಕಳುಹಿಸಬಹುದು.
ಈ 7 ವಿಭಾಗಗಳಲ್ಲೂ ಕನಿಷ್ಠ 3 ಪುಸ್ತಕಗಳು ಬಂದಲ್ಲಿ ಮಾತ್ರ ಅಕಾಡಮಿಯ ನಿಯಮಾವಳಿಯಂತೆ 1 ಪುಸ್ತಕವನ್ನು ಆಯ್ಕೆ ಮಾಡಲಾಗುವುದು. ಪ್ರತಿ ಪ್ರಕಾರಗಳಲ್ಲಿ ಮೂರಕ್ಕಿಂತ ಕಡಿಮೆ ಪುಸ್ತಕಗಳು ಸ್ವೀಕೃತವಾದಲ್ಲಿ, ಮೌಲ್ಯಯುತ ಪುಸ್ತಕಗಳಾಗಿದ್ದರೂ ಸಹ ಅಕಾಡಮಿಯ ನಿಯಮಾವಳಿಯಂತೆ ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗುವುದಿಲ್ಲ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿ ಗೌರವ ಪ್ರಶಸ್ತಿ -2021 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡಮಿ ಪುಸ್ತಕ ಬಹುಮಾನ ಯೋಜನೆ -2021 ಎಂದು ಕಡ್ಡಾಯವಾಗಿ ಬರೆದು ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುಭವನ, ಅಂಚೆ: ಅಶೋಕನಗರ, ಉರ್ವಸ್ಟೋರ್, ಮಂಗಳೂರು - 575 006 ಈ ವಿಳಾಸಕ್ಕೆ ಜನವರಿ 31ರೊಳಗೆ ಕಳುಹಿಸಬಹುದು. ವಿವರಿಗಳಿಗೆ ಮೊ.ಸಂ: 7411572115 ಸಂಪರ್ಕಿಸಬಹುದು ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತಿಳಿಸಿದ್ದಾರೆ.







