ಬಾಲಯೇಸುವಿನ ವಾರ್ಷಿಕ ಮಹೋತ್ಸವದ ನವೆನಾ, ಬಲಿಪೂಜೆಗಳಿಗೆ ಚಾಲನೆ

ಮಂಗಳೂರು, ಜ.4: ನಗರದ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಮಹೋತ್ಸವ, ನವ ದಿನಗಳ ನವೆನಾ ಹಾಗೂ ಬಲಿಪೂಜೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಸಂತ ಜೋಸೆಫರ ಧರ್ಮಗುರು ವಂ. ಚಾರ್ಲ್ಸ್ ಸೆರಾವೊ, ಮಂಗಳೂರು ಬಿಷಪ್ ಹೌಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತಲಿನೊ ಧ್ವಜಾರೋಹಣಗೈದರು. ಕಾರ್ಪೊರೇಟರ್‌ಗಳಾ ನವೀನ್ ಡಿಸೋಜ, ಕೇಶವ್ ಮರೊಳಿ, ಎ.ಸಿ. ವಿನಯರಾಜ್, ಪ್ರಮುಖರಾದ ಲಾರೆನ್ಸ್ ಡಿಸೋಜ, ಆಶಾ ಡಿಸಿಲ್ವಾ, ನಾಗರಾಜ್ ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರದ ನಿರ್ದೇಶಕ ವಂ. ರೊವೆಲ್ ಡಿಸೋಜ ಸ್ವಾಗತಿಸಿದರು. ವಂ. ಲ್ಯಾನ್ಸಿ ಲೂಸ್, ವಂ. ರುಡೋಲ್ಫ್ ಪಿಂಟೊ, ವಂ. ಸ್ಟೀವನ್ ಲೋಬೊ, ವಂ. ಜೊಸ್ಸಿ ಡಿಸೋಜ, ವಂ.ಟೋನಿ ಪಾಲ್ಗೊಂಡಿದ್ದರು.
Next Story





