'ಬುಲ್ಲಿ ಬಾಯ್' ಆ್ಯಪ್ ಪ್ರಕರಣ: ಮೂರನೇ ಆರೋಪಿಯನ್ನು ಬಂಧಿಸಿದ ಪೊಲೀಸರು

Photo: Twitter
ಹೊಸದಿಲ್ಲಿ: 100 ಕ್ಕೂ ಹೆಚ್ಚು ಪ್ರಮುಖ ಮುಸ್ಲಿಂ ಮಹಿಳೆಯರನ್ನು "ಆನ್ಲೈನ್ ಹರಾಜಿಗೆ" ಪಟ್ಟಿ ಮಾಡಲಾದ 'ಬುಲ್ಲಿ ಬಾಯ್' ಅಪ್ಲಿಕೇಶನ್ಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು indiatoday.in ಬುಧವಾರ ವರದಿ ಮಾಡಿದೆ.
ಆರೋಪಿಯನ್ನು 21 ವರ್ಷದ ಮಯಾಂಕ್ ರಾವಲ್ ಎಂದು ಗುರುತಿಸಲಾಗಿದ್ದು, ಆತನನ್ನು ಉತ್ತರಾಖಂಡದಿಂದ ಬಂಧಿಸಲಾಗಿದೆ. ಮಂಗಳವಾರ, ಮುಂಬೈ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಮತ್ತು 18 ವರ್ಷದ ಶ್ವೇತಾ ಸಿಂಗ್ ಎಂಬಾಕೆಯನ್ನು ಬಂಧಿಸಿದ್ದರು.
ಬಾಂದ್ರಾ ನ್ಯಾಯಾಲಯವು ಕುಮಾರ್ ನನ್ನು ಜನವರಿ 10ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಹಿಳೆಯು "ಬುಲ್ಲಿ ಬಾಯ್" ಎಂಬ ಓಪನ್ ಸೋರ್ಸ್ ಅಪ್ಲಿಕೇಶನ್ಗೆ ಸಂಬಂಧಿಸಿದ ಮೂರು ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅನುಮತಿಯಿಲ್ಲದೆ ತೆಗೆಯಲಾಗಿದ್ದು, ಮತ್ತು ಆ ದಿನದ "ಬುಲ್ಲಿ ಬಾಯ್" ಎಂದು ಮಾರಾಟಕ್ಕಾಗಿ ಅಪ್ಲಿಕೇಶನ್ನಲ್ಲಿ ಪ್ರದರ್ಶಿಸಲಾಗಿತ್ತು.





