ಉಡುಪಿ ಜಿಲ್ಲೆಯ ಪ್ರಥಮ ‘ಸಂಜೀವಿನಿ ಕೆಫೆ’ ಉದ್ಘಾಟನೆ

ಉಡುಪಿ, ಜ.5: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಬ್ರಹ್ಮಾವರದ ವಾರಂಬಳ್ಳಿ ಗ್ರಾಪಂ ವ್ಯಾಪ್ತಿಯ ಸಮುದಾಯದ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಪಂ, ತಾಪಂ, ಬ್ರಹ್ಮಾವರ ಹಾಗೂ ವಾರಂಬಳ್ಳಿ ಗ್ರಾಪಂ ನೇತೃತ್ವದಲ್ಲಿ ಸಂಜೀವಿನಿ ಸಂಘದ ಐವರು ಮಹಿಳೆಯರು ಸೇರಿ ಆರಂಭಿಸಿರುವ ಸಂಜೀವಿನಿ ಕೆಫೆ ಕ್ಯಾಂಟೀನನ್ನು ಉಡುಪಿ ಶಾಸಕ ರಘುಪತಿ ಭಟ್ ಶನಿವಾರ ಉದ್ಘಾಟಿಸಿದರು.
ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಸದಾನಂದ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾ ಧಿಕಾರಿ ಎಚ್.ವಿ.ಇಬ್ರಾಹಿಂಪುರ್, ವಾರಂಬಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಜಾನಾ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ, ಎನ್‌ಆರ್‌ಎಲ್ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಬಿರ್ತಿ ರಾಜೇಶ್ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬೇಬಿ ಉಪಸ್ಥಿತರಿದ್ದರು.
Next Story





