ಉಡುಪಿ ನಗರಸಭೆ: ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಡಿ.ಬಾಲಕೃಷ್ಣ ಶೆಟ್ಟಿ ಆಯ್ಕೆ

ಉಡುಪಿ, ಜ.5: ಉಡುಪಿ ನಗರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮುಂದಿನ ಒಂದು ವರ್ಷದ ಅವಧಿಗೆ ಕಕ್ಕುಂಜೆ ವಾರ್ಡ್‌ನ ಸದಸ್ಯ ಡಿ.ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸದಸ್ಯರಾದ ಮಂಜುನಾಥ್ ಮಣಿಪಾಲ, ಸುಂದರ ಕಲ್ಮಾಡಿ, ಹರೀಶ್ ಶೆಟ್ಟಿ, ಸವಿತಾ ಹರೀಶ್‌ರಾಮ್ ಬನ್ನಂಜೆ, ರಜನಿ ಹೆಬ್ಬಾರ್, ಗಿರಿಧರ ಆಚಾರ್ಯ, ರಶ್ಮಿ ಸಿ ಭಟ್, ರಾಜು ಕಸ್ತೂರ್ಬಾನಗರ, ಸಂತೋಷ ಜತ್ತನ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ ಸಭೆಯಲ್ಲಿ ಹಾಜರಿದ್ದರು.
ಒಳಚರಂಡಿ ವ್ಯವಸ್ಥೆಗೆ ಸಭೆ: ಮುಂಬರುವ ಶ್ರೀ ಕೃಷ್ಣ ಮಠದ ಪರ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ವಿಭಾಗವಾದ ಒಳಚರಂಡಿ ವ್ಯವಸ್ಥೆಗಳ ಬಗ್ಗೆ ಬುಧವಾರ ನಗರಸಭೆಯಲ್ಲಿ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ಪೌರ ಕಾರ್ಮಿಕರ ಜೊತೆಗೆ ಸಮಾಲೋಚನಾ ಸಭೆಯನ್ನು ಆಯೊಜಿಸಲಾಗಿತ್ತು.
ಉಡುಪಿ ನಗರದ ತ್ಯಾಜ್ಯ ನೀರಿನ ವಿಲೇವಾರಿ ಬಗ್ಗೆ ಒಳಚರಂಡಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರು ವಿವಿಧ ಸಲಹೆಗಳನ್ನು ನೀಡಿದರು ಹಾಗೂ ಸುಧಾರಿತ ಯಂತ್ರಗಳನ್ನು ಖರೀದಿಸಲು ಮನವಿ ಮಾಡಿದರು.
ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಗಿರೀಶ್ ಎಂ.ಅಂಚನ್, ಗಿರಿಧರ ಆಚಾರ್ಯ, ಸುಂದರ ಕಲ್ಮಾಡಿ, ಹರೀಶ್ ಶೆಟ್ಟಿ , ವಿಜಯ ಕೊಡವೂರು, ಮಂಜುನಾಥ್ ಮಣಿಪಾಲ, ಸವಿತಾ ಹರೀಶ್‌ರಾಮ ಬನ್ನಂಜೆ, ಶ್ರೀಶ ಕೊಡವೂರು ಉಪಸ್ಥಿತರಿದ್ದರು.







