ಆನೆಗುಡ್ಡೆ ದೇವಳದಲ್ಲಿ ಸೇವೆಗಳು ಸ್ಥಗಿತ: ದರ್ಶನಕ್ಕೆ ಅವಕಾಶ
ಕುಂದಾಪುರ, ಜ.5: ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದಲ್ಲಿ ಸರ್ಕಾರದ ಆದೇಶ ದಂತೆ, ಕೋವಿಡ್19 ರ ಮಾರ್ಗಸೂಚಿ ಯನ್ವಯ ಜ.6ರ ಗುರುವಾರದಿಂದ ಎಲ್ಲಾ ವಿಧದ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.
ಎರಡು ಲಸಿಕೆಗಳನ್ನು ಹಾಕಿಸಿ ಕೊಂಡ, ಮಾಸ್ಕ್ ಧರಿಸಿದವರಿಗೆ ಒಮ್ಮೆಗೆ 50 ಜನರಂತೆ ದೇವರ ದರ್ಶನಕ್ಕೆ ಒಮ್ಮೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತೀರ್ಥ - ಪ್ರಸಾದ, ಹಣ್ಣುಕಾಯಿ ಸೇವೆ ಇರುವುದಿಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಕೋವಿಡ್ ಪ್ರಸರಣವನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಸರ್ಕಾರದ ಮುಂದಿನ ಆದೇಶದ ತನಕ ಈ ನಿಯಮ ಜಾರಿಯಲ್ಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





