ಮಂಂಗಳೂರು: ಪರ್ಸ್ ಹಸ್ತಾಂತರ
ಮಂಗಳೂರು, ಜ.5: ನಗರದ ಕುಂಟಿಕಾನ ಬಳಿ ಮಂಗಳವಾರ ಬಿದ್ದು ಸಿಕ್ಕಿದ್ದ ದಾಖಲೆಗಳಿದ್ದ ಪರ್ಸ್‌ನ್ನು ವಾರಸುದಾರರಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಹಸ್ತಾಂತರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಗರ ಯೋಜನೆ ಅಧಿಕಾರಿಗಳಾಗಿರುವ ಉಬೈದುಲ್ಲಾ ಮತ್ತು ಶರೀಖ್ ಮುಹಮ್ಮದ್ ಬಡ್ಡೂರ್ ಅವರಿಗೆ ಸೋಮವಾರ ಪರ್ಸ್ ಲಭಿಸಿತ್ತು.
ಸೌಮ್ಯ ಪುತ್ತೂರು ಎಂಬವರಿಗೆ ಸೇರಿದ ಈ ಪರ್ಸ್‌ನಲ್ಲಿ ಹಣ, ಮತದಾರರ ಗುರುತಿನ ಚೀಟಿ ಸೇರಿದಂತೆ ಅಮೂಲ್ಯ ದಾಖಲೆ ಗಳಿದ್ದವು. ಈ ಪರ್ಸ್‌ನ್ನು ಪೊಲೀಸ್ ಆಯುಕ್ತರಿಗೆ ತಂದೊಪ್ಪಿಸಲಾಗಿತ್ತು. ಪರ್ಸ್ ಕಳೆದುಕೊಂಡಿದ್ದ ಸೌಮ್ಯ ಬುಧವಾರ ಆಗಮಿಸಿ, ಪೊಲೀಸ್ ಆಯುಕ್ತರಿಂದ ಪರ್ಸ್ ಸ್ವೀಕರಿಸಿ ಯೋಜನಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್ ಉಪಸ್ಥಿತರಿದ್ದರು.
Next Story





