ಕೊಂಕಣಿ ಅಕಾಡಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಜ.5: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು 2021ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ.
ಗೌರವ ಪ್ರಶಸ್ತಿಗಾಗಿ ಕೊಂಕಣಿ ಸಾಹಿತ್ಯ, ಕಲೆ (ನಾಟಕ, ಸಂಗೀತ, ಚಲನಚಿತ್ರ) ಮತ್ತು ಜಾನಪದ ವಿಭಾಗಗಳಲ್ಲಿ ಜೀವಮಾನ ಸಾಧನೆಗಾಗಿ ಅರ್ಹ ಸಾಧಕರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಾಧಕರ ಹೆಸರು ಸೂಚಿಸಿ ಅರ್ಜಿ ಸಲ್ಲಿಸಬಹುದು.
ಪುಸ್ತಕ ಭಾಗದಲ್ಲಿ ಜ.1, 2021ರಿಂದ ಡಿ.31,2021ರವರೆಗೆ ಪ್ರಕಟಿತವಾದ ಕೊಂಕಣಿ ಸಣ್ಣ ಕತೆ ಅಥವಾ ಕಾದಂಬರಿ ಮತ್ತು ಕೊಂಕಣಿಗೆ ಭಾಷಾಂತರಿಸಿದ ಕೃತಿ, ಲೇಖನ, ಅಧ್ಯಯನ, ವಿಮರ್ಶೆ ಇತ್ಯಾದಿ ಕೃತಿಗಳನ್ನು ಲೇಖಕರು/ಪ್ರಕಾಶಕರು ಪ್ರಸ್ತಕದ 4 ಪ್ರತಿಗಳ ಜೊತೆಗೆ ಜ.31ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಮಾಹಿತಿಗಾಗಿ ಕೊಂಕಣಿ ಅಕಾಡಮಿಯ ಕಚೇರಿ (ದೂ.ಸಂ:0824-2453167)ನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ರಿಜಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





