ಸ್ವಾತಂತ್ರ ಹೋರಾಟಗಾರ, ಶತಾಯುಷಿ ಅಯ್ಯಪ್ಪನ್ ಪಿಳ್ಳೈ ನಿಧನ

ಕೆ. ಅಯ್ಯಪ್ಪನ್ ಪಿಳ್ಳೈ(photo:ANI)
ತಿರುವನಂತಪುರ,ಜ.5: ಸ್ವಾತಂತ್ರ ಹೋರಾಟಗಾರ ಹಾಗೂ ದೇಶದ ಹಿರಿಯ ನ್ಯಾಯವಾದಿ ಕೆ. ಅಯ್ಯಪ್ಪನ್ ಪಿಳ್ಳೈ ಬುಧವಾರ ನಿಧನರಾಗಿದ್ದರು. ಅವರಿಗೆ 107 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದ ಅವರು ತಿರುವನಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 6:15ಕ್ಕೆ ಕೊನೆಯುಸಿರೆಳೆದರು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸ್ವಾತಂತ್ರ ಹೋರಾಟಗಾರನಾಗಿ, ರಾಜಕೀಯ ನಾಯಕನಾಗಿ ಹಾಗೂ ಖ್ಯಾತ ನ್ಯಾಯವಾದಿಯಾಗಿ ಕೆ. ಅಯ್ಯಪ್ಪನ್ ಪಿಳ್ಳೈ ಜನಪ್ರಿಯರಾಗಿದ್ದರು. ಸ್ವಾತಂತ್ರ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಅವರು ಗಾಂಧೀಜಿಯವರನ್ನು ಭೇಟಿಯಾದ ಬಳಿಕ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದರು. ಹಿಂದಿನ ತಿರುವಾಂಕೂರು ಸಂಸ್ಥಾನದಲ್ಲಿ ಚುನಾಯಿತ ಜನಪ್ರತಿನಿಧಿಗಳ ಅಸೆಂಬ್ಲಿಯಾಗಿದ್ದ ‘ಶ್ರೀಮೂಲಂ ಪ್ರಜಾಸಭಾ’ದ ಸದಸ್ಯರಾಗಿ ಅವರು ಆಯ್ಕೆಯಾಗಿದ್ದರು.1942ನೇ ಇಸವಿಯಲ್ಲಿ ತಿರುವನಂತಪುರ ಮುನ್ಸಿಪಲ್ ಕೌನ್ಸಿಲ್ನ ಸದಸ್ಯರಾಗಿ ಆಯ್ಕೆಯಾಗಿದ್ದರು. 1980ರ ದಶಕದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
Next Story





