ಕಟ್ಟಡ ಕಾರ್ಮಿಕರ ಕೆಲಸಕ್ಕೆ ತೆರಳಲು ಅವಕಾಶಕ್ಕಾಗಿ ಮನವಿ
ಉಡುಪಿ, ಜ.6: ವಾರಾಂತ್ಯದ ಕರ್ಪ್ಯೂವಿನಲ್ಲಿ ಕಟ್ಟಡ ಕಾರ್ಮಿಕರಿಗೆ ಅಡ್ಡಿ ಪಡಿಸದೆ ನಿರ್ಮಾಣ ಕೆಲಸಕ್ಕೆ ಅವಕಾಶ ನೀಡಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದೆ.
ದಿನಗೂಲಿ ಕಾರ್ಮಿಕರಾಗಿರುವ ಕಟ್ಟಡ ಕಾರ್ಮಿಕರು ಕಳೆದ ಎರಡು ಲಾಕ್ ಡೌನ್ನಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ನಿರ್ಮಾಣ ಕ್ಷೇತ್ರದ ಬಿಕ್ಕಟ್ಟಿನಿಂದಾಗಿ ನಿರ್ಮಾಣ ಕೆಲಸಗಳು ಕುಂಠಿತಗೊಂಡು ಯಾವುದೇ ಆರ್ಥಿಕ ಭದ್ರತೆ ಇಲ್ಲದ ಕಾರ್ಮಿಕ ವರ್ಗವಾಗಿದೆ. ವಿವಿಧ ರೀತಿಯ ಸಾಲ ಕಟ್ಟಲಾಗದೇ ಕುಟುಂಬ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಆದುದರಿಂದ ವಾರಾಂತ್ಯ ಕರ್ಪ್ಯೂವಿಂದ ಕಟ್ಟಡ ಕಾರ್ಮಿಕರಿಗೆ ವಿನಾಯಿತಿ ನೀಡಬೇಕೆಂದು ಇಲಾಖೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಒತ್ತಾಯಿಸಿದ್ದಾರೆ.
Next Story





