‘ಐತಿಹಾಸಿಕ’ ರಕ್ಷಣಾ ಒಪ್ಪಂದಕ್ಕೆ ಆಸ್ಟ್ರೇಲಿಯಾ-ಜಪಾನ್ ಸಹಿ

photo:PTI
‘ಸಿಡ್ನಿ, ಜ.6: ಇಂಡೊ-ಪೆಸಿಫಿಕ್ ವಲಯದಲ್ಲಿ ಚೀನಾದ ಮಿಲಿಟರಿ ಮತ್ತು ಆರ್ಥಿಕ ಪ್ರಾಬಲ್ಯ ವಿಸ್ತರಣೆಗೊಳ್ಳುತ್ತಿರುವ ಮಧ್ಯೆಯೇ ಆಸ್ಟ್ರೇಲಿಯಾ ಮತ್ತು ಜಪಾನ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು ಈ ವಲಯದಲ್ಲಿ ಸ್ಥಿರತೆಗೆ ಈ ಐತಿಹಾಸಿಕ ಒಪ್ಪಂದ’ ಪೂರಕವಾಗಿದೆ . ಒಪ್ಪಂವು ಆಸ್ಟ್ರೇಲಿಯಾ ರಕ್ಷಣಾ ಪಡೆ ಮತ್ತು ಜಪಾನ್ನ ರಕ್ಷಣಾ ಪಡೆಯ ನಡುವೆ ಹೆಚ್ಚಿನ ಮತ್ತು ಸಂಕೀರ್ಣ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಗುರುವಾರ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ನಡುವೆ ವರ್ಚುವಲ್ ವೇದಿಕೆಯಲ್ಲಿ ನಡೆದ ಶೃಂಗಸಭೆಯಲ್ಲಿ ‘ರೆಸಿಪ್ರೋಕಲ್ ಅಕ್ಸೆಸ್ ಎಗ್ರಿಮೆಂಟ್(ಆರ್ಎಎ) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜಪಾನ್ ಇತರ ದೇಶಗಳೊಂದಿಗೆ ಹೊಂದಿರುವ 2ನೇ ಮಿಲಿಟರಿ ಒಪ್ಪಂದ ಇದಾಗಿದೆ. 1960ರಲ್ಲಿ ಜಪಾನ್-ಅಮೆರಿಕ ಮಧ್ಯೆ ಮಿಲಿಟರಿ ಒಪ್ಪಂದ ಏರ್ಪಟ್ಟಿದೆ.
ಇದೊಂದು ಪ್ರಮುಖ ಒಪ್ಪಂದವಾಗಿದ್ದು 2 ದೇಶಗಳ ನಡುವಿನ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಎತ್ತರಕ್ಕೆ ಹೆಚ್ಚಿಸಲಿದೆ. ಶೀಘ್ರವೇ ಬ್ರಿಟನ್ ಮತ್ತು ಫ್ರಾನ್ಸ್ ಜತೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು ಎಂದು ಜಪಾನ್ ಪ್ರಧಾನಿ ಕಿಷಿಡಾ ಹೇಳಿದ್ದಾರೆ.





