ಕಂದಾಯ ಸಚಿವ ಆರ್.ಅಶೋಕ್ ರಿಗೆ ಕೋವಿಡ್ ಪಾಸಿಟಿವ್, ಖಾಸಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು, ಜ.7: ಕಂದಾಯ ಸಚಿವ ಆರ್. ಅಶೋಕ್ ರಿಗೆ ಕೋವಿಡ್-19 ತಗಲಿರುವುದು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನಗೆ ಕೋವಿಡ್ ದೃಢವಾಗಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ' ಎಂದಿದ್ದಾರೆ.
ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸಾ ವ್ಯವಸ್ಥೆ ಕುರಿತು ಚರ್ಚಿಸಲು ಅವರು ಮುಖ್ಯಮಂತ್ರಿ ಜೊತೆ ಎಲ್ಲ ಸಭೆಗಳಲ್ಲೂ ಆರ್. ಅಶೋಕ್ ಉಪಸ್ಥಿತರಿದ್ದರು. ಸಚಿವ ಸುಧಾಕರ್ ಕೂಡ ಜೊತೆಯಲ್ಲಿದ್ದರು. ಅಲ್ಲದೆ, ಕೋವಿಡ್ ತಜ್ಞರ ಸಭೆಯಲ್ಲೂ ಭಾಗಿಯಾಗಿದ್ದರು.
ನನಗೆ ಕೋವಿಡ್ ದೃಢವಾಗಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— R. Ashoka (ಆರ್. ಅಶೋಕ) (@RAshokaBJP) January 7, 2022
Next Story







