ಮಕ್ಕಳ ಐಸಿಯು: ಕಾರ್ಕಳ ಸರಕಾರಿ ಆಸ್ಪತ್ರೆಗೆ 78.18ಲಕ್ಷ ರೂ. ನೆರವು

ಉಡುಪಿ, ಜ.7: ಯುಪಿಸಿಎಲ್ ಸಂಸ್ಥೆಯು ಕೋವಿಡ್ 3ನೇ ಅಲೆಯಲ್ಲಿ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 10 ಪೀಡಿ ಯಾಟ್ರಿಕ್ ಐಸಿಯು ವೆಂಟಿಲೇಟರ್ ಬೆಡ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳನ್ನು ಸ್ಥಾಪಿಸಲು ಉಡುಪಿ ಜಿಲ್ಲಾಡಳಿತಕ್ಕೆ 78.18 ಲಕ್ಷ ರೂ. ದೇಣಿಗೆಯನ್ನು ನೀಡಿದೆ.
ಅದಾನಿ ಸಮೂಹದ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಅದಾನಿ ಫೌಂಡೇಷನ್ ವತಿಯಿಂದ ನೀಡಲ್ಪಟ್ಟ 78,18,500 ರೂ. ಮೊತ್ತದ ಡಿಡಿಯನ್ನು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಿದರು.
ಮಕ್ಕಳ ಐಸಿಯು ವೆಂಟಿಲೇಟರ್ ವಾರ್ಡ್‌ಗಳಿಗೆ ಬೇಕಾದ ವೈದ್ಯಕೀಯ ಉಪಕರಣಗಳಾದ ಮಲ್ಟಿಪ್ಯಾರ ಮಾನಿಟರ್, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್, ಸಿರಿಂಜ್ ಇನ್ಫ್ಯೂಷನ್ ಪಂಪ್, ಡ್ರಿಪ್‌ಇನ್ಫ್ಯೂಷನ್ ಪಂಪ್, ಮೊಡ್ಯೂಲರ್ ವಾಲ್ ಮೌಂಟ್ ಮಾನಿಟರ್ ಸ್ಟ್ಯಾಂಡ್, ಪೋರ್ಟಬಲ್ ಯುಎಸ್‌ಜಿ ಯಂತ್ರ, ಡಿಫಿಬ್ರಿಲ್ಲೇಟರ್, ಕಾರ್ಡಿಯಾಕ್‌ಟೇಬಲ್, ಲಾರಿಂಗೋ ಸ್ಕೋಪ್ ಹ್ಯಾಂಡಲ್, ಡೆಸ್ಕ್‌ಟಾಪ್ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್, ರಿಸಸ್ಕಿಟೇಷನ್ ಕೌಚ್, ಈಸಿಜಿ ಯಂತ್ರ, ರೇಡಿಯಂಟ್ ವಾರ್ಮರ್, ಎಮರ್ಜೆನ್ಸಿ ಟ್ರಾಲಿ, ಘ್ಲೋ ನಸಾಲ್ ಕ್ಯಾನುಲ, ಬಿಪ್ಯಾಪ್ ಯಂತ್ರ, ಹ್ಯೂಮಿಡಿೈಯರ್, ವೆಂಟಿಲೇಟರ್ ಸರ್ಕ್ಯುಟ್ಸ್, ಇವೆಲ್ಲವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಲು ಜಿಲ್ಲಾಡಳಿತ ಮನವಿ ಮಾಡಿತ್ತು. ಅದರಂತೆ ಈ ಮೊತ್ತವನ್ನು ನೀಡಲಾಗಿದೆ ಈ ಹಿಂದೆ ಕೋವಿಡ್ ಎದುರಿಸಲು ಅದಾನಿ ೌಂಡೇಶನ್ 40 ಲಕ್ಷ ರೂ. ದೇಣಿಗೆಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು ಎಂದು ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







