ಉಡುಪಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಸಮಾರೋಪ

ಉಡುಪಿ, ಜ.7: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಶುಕ್ರವಾರ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಎಸ್‌ಟಿ ಉಡುಪಿ ವಿಭಾಗದ ಸಹಾಯಕ ಆಯುಕ್ತ ಡಾ.ನಿಮಿಶಾಂಬ ಸಿ.ಪಿ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುರುಷರ ವಿಭಾಗದಲ್ಲಿ ಬೈಂದೂರು ಪೊಲೀಸ್ ಠಾಣೆಯ ನಾಗೇಶ್ ಗೌಡ ಮತ್ತು ಮಹಿಳೆಯರ ವಿಭಾಗದಲ್ಲಿ ಮಹಿಳಾ ಠಾಣೆಯ ಜಯ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ವಾಲಿಬಾಲ್‌ನಲ್ಲಿ ಪ್ರ-ಜಿಲ್ಲಾ ಪೊಲೀಸ್ ಕಚೇರಿ ತಂಡ(ಡಿಪಿಓ), ದ್ವಿ- ಜಿಲ್ಲಾ ಸಶಸ್ತ್ರ ಮೀಸಲು ತಂಡ(ಡಿಎಆರ್), ಹಗ್ಗಜಗ್ಗಾಟದ ಪುರುಷರ ವಿಭಾಗದಲ್ಲಿ ಪ್ರ-ಡಿಪಿಓ, ದ್ವಿ- ಕುಂದಾಪುರ ಉಪವಿಭಾಗ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರ- ಉಡುಪಿ ಉಪವಿಭಾಗ, ದ್ವಿ- ಕುಂದಾಪುರ, ಕಬಡ್ಡಿಯಲ್ಲಿ ಪ್ರ- ಡಿಎಆರ್, ದ್ವಿ- ಉಡುಪಿ, ಮಹಿಳೆಯರ ಥ್ರೋಬಾಲ್‌ನಲ್ಲಿ ಪ್ರ-ಉಡುಪಿ, ದ್ವಿ-ಕುಂದಾಪುರ ತಂಡ ಬಹುಮಾನ ಗಳಿಸಿತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.







