ಡಿವೈಎಫ್‌ಐ ‘ಪಾದಯಾತ್ರೆ’ಗಳು ಮುಂದೂಡಿಕೆ
ಮಂಗಳೂರು,ಜ.7: ಹೆಚ್ಚತ್ತಿರುವ ನಿರುದ್ಯೋಗದ ಸಮಸ್ಯೆಗಳ ಹಿನ್ನಲೆಯಲ್ಲಿ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ ಘೋಷಣೆಯಡಿ ಡಿವೈಎಫ್‌ಐ ದ.ಕ.ಜಿಲ್ಲೆಯ ತಾಲೂಕು ಮಟ್ಟದಲ್ಲಿ ಹಮ್ಮಿಕೊಂಡಿದ್ದ ಯುವಜನ ಪಾದಯಾತ್ರೆಗಳನ್ನು ರಾಜ್ಯ ಸರಕಾರದ ಹೊಸ ಕೋವಿಡ್ ನಿರ್ಬಂಧಗಳ ಕಾರಣ ಮುಂದೂಡಲಾಗಿದೆ.
ಜ.9ರಂದು ಮುಡಿಪುವಿನಿಂದ ತೊಕ್ಕೊಟ್ಟುವರಗೆ ನಡೆಯಲಿದ್ದ ಉಳ್ಳಾಲ ತಾಲೂಕು ಮಟ್ಟದ ಪಾದಯಾತ್ರೆಯನ್ನು ಫೆಬ್ರವರಿ 6 ಮತ್ತು ಜ.17ರಂದು ಲೇಡಿಹಿಲ್ನಿಂದ ಎಂಆರ್‌ಪಿಎಲ್‌ವರೆಗೆ ನಡೆಯಲಿದ್ದ ಮಂಗಳೂರು ನಗರ ಮಟ್ಟದ ಪಾದಯಾತ್ರೆಯನ್ನು ಫೆ.14ರಂದು ನಡೆಸಲಾಗುವುದು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ತಿಳಿಸಿದೆ.
Next Story





