ಎಸ್ಕೆಎಸೆಸ್ಸೆಫ್ ಕೊಡುಗೆ; ಕುಕ್ಕಾಜೆ ಪ್ರೌಢಶಾಲೆಯ ಆವರಣ ಗೋಡೆ, ದ್ವಾರ ಉದ್ಘಾಟನೆ

ಮಂಗಳೂರು, ಜ.7: ಶಾಲೆಯು ಸರ್ವ ಧರ್ಮೀಯರು ಕಲಿಯುವ ಕೇಂದ್ರವಾಗಿರುವುದರಿಂದ ಸರ್ವಧರ್ಮೀಯರ ಕ್ಷೇತ್ರ ಇದಾಗಿದೆ. ಸಮಾಜದ ಕಣ್ಣೂ ಇದಾದ ಕಾರಣ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಂಚಿ ಸರಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಐತಾಳ್ ಹೇಳಿದರು.
ಕುಕ್ಕಾಜೆ ವಲಯ ಎಸ್ಕೆಎಸ್ಸೆಎಸ್ಸೆಫ್ ವತಿಯಿಂದ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆ ಸರಕಾರಿ ಪ್ರೌಢಶಾಲೆಗೆ ಕೊಡುಗೆ ಯಾಗಿ ನೀಡಲ್ಪಟ್ಟ ಆವರಣ ಗೋಡೆ ಮತ್ತು ದ್ವಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಜಾಗದ ಕೊರತೆ ಸಹಿತ ಸಾಕಷ್ಟು ಅಡೆತಡೆಗಳಿದ್ದರೂ ಕೂಡ ಪ್ರೌಢಶಾಲೆ ಆರಂಭಿಸಲಾಗಿದೆ. ಇದೀಗ ಅತ್ಯಗತ್ಯವಾದ ಗೇಟು ಮತ್ತು ದ್ವಾರ ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಸಮರ್ಪಕ ಸಭಾಂಗಣ ನಿರ್ಮಿಸುವ ಯೋಜನೆ ಇದೆ ಎಂದು ಗಣೇಶ್ ಐತಾಳ್ ತಿಳಿಸಿದರು.
ದ.ಕ. ಜಿಲ್ಲಾ ಎಸ್ಕೆಎಸ್ಸೆಎಸ್ಸೆಫ್ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ಉದ್ಘಾಟಿಸಿದರು. ಎಸ್ಕೆಎಸ್ಸೆಎಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಬಂಟ್ವಾಳ, ನಿವೃತ್ತ ಶಿಕ್ಷಕ ಸುರೇಶ್, ಎಸ್ಕೆಎಸ್ಸೆಎಸ್ಸೆಫ್ ಕುಕ್ಕಾಜೆ ವಲಯಾಧ್ಯಕ್ಷ ಹಂಝ ಕುರಿಯಪ್ಪಾಡಿ, ಮಂಚಿ ಗ್ರಾಪಂ ಮಾಜಿ ಸದಸ್ಯ ಹಸೈನಾರ್, ವಿಲ್ಮಾ ಶಾಂತಿ ಡಿಸೋಜ, ಅನ್ಸಾರ್ ನೋಳ, ಕುಕ್ಕಾಜೆ ಜುಮಾ ಮಸೀದಿಯ ಕಾರ್ಯದರ್ಶಿ ರಫೀಕ್ ಹಾಜಿ, ಎಸ್ಕೆಎಸ್ಸೆಎಸ್ಸೆಫ್ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಶ್ ನೂಜಿಪಾಡಿ, ಸಿರಾಜ್‌ಎಚ್., ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬೂ ಸಿರಾಜ್, ಧರ್ಮಗುರುಗಳಾದ ಅಬೂಬಕರ್ ಮುಸ್ಲಿಯಾರ್, ಉಸ್ಮಾನ್ ರಾಝಿ ಬಾಖವಿ, ಶಿಕ್ಷಣ ಪ್ರೇಮಿ ತೋಟ ಅಬೂಬಕ್ಕರ್, ಅಡ್ವಕೇಟ್ ಬದ್ರುದ್ದೀನ್, ಯುನಿಟ್ ಕಾರ್ಯದರ್ಶಿ ಅತ್ತಾವುಲ್ಲಾ, ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಟಿ. ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ನಾಯ್ಕ ಟಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಕೇಶವ ವಂದಿಸಿದರು. ಶಿಕ್ಷಕ ಶಿವಕುಮಾರ್ ಮುಸಂಡಿ ಕಾರ್ಯಕ್ರಮ ನಿರೂಪಿಸಿದರು.







