ಸ್ಪರ್ಧೆಗೆ ವ್ಯಂಗ್ಯಚಿತ್ರ ಆಹ್ವಾನ
ಬೆಂಗಳೂರು, ಜ.8: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 14ನೇ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಪ್ರಶಸ್ತಿ ಸ್ಪರ್ಧೆ-2021 ರಾಜಕೀಯ ವ್ಯಂಗ್ಯ ಚಿತ್ರಗಳನ್ನು ಆಹ್ವಾನಿಸಿದೆ. ಸ್ಪರ್ಧೆಗೆ 2021ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಪ್ರಕಟವಾದ ಗರಿಷ್ಠ ವ್ಯಂಗ್ಯಚಿತ್ರಗಳನ್ನು ಮಾ.31ರೊಳಗೆ ಕಳುಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಉತ್ತಮ ರಾಜಕೀಯ ವ್ಯಂಗ್ಯಚಿತ್ರ ಪ್ರಶಸ್ತಿ-2021 ವಿಭಾಗದಲ್ಲಿ ಆಯ್ಕೆಯಾದ ಪ್ರಥಮ ಬಹುಮಾನಕ್ಕೆ ರೂ. 25,000, ದ್ವಿತೀಯ ಬಹುಮಾನಕ್ಕೆ ರೂ. 15,000, ತೃತೀಯ ಬಹುಮಾನಕ್ಕೆ ರೂ. 5,000 ಹಾಗೂ 3 ಆಯ್ಕೆ ಸಮಿತಿಯ ಮೆಚ್ಚುಗೆ ಬಹುಮಾನಗಳಿಗೆ ತಲಾ ರೂ.2,500 ನಗದು ನೀಡಿ ವ್ಯಂಗ್ಯಚಿತ್ರಕಾರರನ್ನು ಗೌರವಿಸಲಾಗುವುದು.
ಉತ್ತಮ ವಿದೇಶೀ ವ್ಯಂಗ್ಯಚಿತ್ರ ಪ್ರಶಸ್ತಿ - 2021 ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ 200 ಡಾಲರ್ ಗಳನ್ನು, ದ್ವಿತೀಯ ಬಹುಮಾನಕ್ಕೆ 100 ಡಾಲರ್‍ಗಳನ್ನು ನೀಡಲಾಗುವುದು. ಉತ್ತಮ ಉದಯೋನ್ಮುಖ ವ್ಯಂಗ್ಯಚಿತ್ರಕಾರ ಪ್ರಶಸ್ತಿ-2021 ವಿಭಾಗದಲ್ಲಿ 25 ವರ್ಷದ ವ್ಯಂಗ್ಯ ಚಿತ್ರಗಾರರು ಸ್ಪರ್ಧಿಸಲು ಅರ್ಹರಿರುತ್ತಾರೆ. ವಿಜೇತರೊಬ್ಬರಿಗೆ ರೂ. 10,000 ಬಹುಮಾನವನ್ನು ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ನಂ. 1, ಮಿಡ್‍ಫೋರ್ಡ್ ಹೌಸ್, ಮಿಡ್‍ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಕಿಡ್ಸ್ ಕೆಂಪ್ ಹತ್ತಿರ, ಬೆಂಗಳೂರು-560 001 ಈ ವಿಳಾಸಕ್ಕೆ ಆಸಕ್ತರು ವ್ಯಂಗ್ಯಚಿತ್ರಗಳನ್ನು ಕಳುಹಿಸಬಹುದಾಗಿದೆ.







