ದ.ಕ.ಜಿಲ್ಲೆ: 295 ಮಂದಿಗೆ ಕೋವಿಡ್ ಪಾಸಿಟಿವ್
![ದ.ಕ.ಜಿಲ್ಲೆ: 295 ಮಂದಿಗೆ ಕೋವಿಡ್ ಪಾಸಿಟಿವ್ ದ.ಕ.ಜಿಲ್ಲೆ: 295 ಮಂದಿಗೆ ಕೋವಿಡ್ ಪಾಸಿಟಿವ್](https://www.varthabharati.in/sites/default/files/images/articles/2022/01/8/320693-1641653868.jpg)
ಮಂಗಳೂರು, ಜ.8: ದ.ಕ.ಜಿಲ್ಲೆಯಲ್ಲಿ ಶನಿವಾರ 295 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 14 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ. 2.91 ದಾಖಲಾಗಿದೆ.
1,17,343 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,14,645 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 1,704 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 994 ಸಕ್ರಿಯ ಪ್ರಕರಣವಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 92,204 ಪ್ರಕರಣ ದಾಖಲಿಸಿ, 1,11,46,630 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story