ಲಿಖಿತ ಯು.ಗೆ ಪಿಎಚ್‌ಡಿ ಪದವಿ

ಉಡುಪಿ, ಜ.8: ಲಿಖಿತ ಯು. ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ‘ಸ್ಟಡೀಸ್ ಆನ್ ಕೋ ಕ್ರಿಸ್ಟಲ್ ಆ್ಯಂಡ್ ಪಾಲಿಮೋಫರ್ಸ್ ಆಫ್ ಫಾರ್ಮಸುಟಿಕಲಿ ಇಂಪಾರ್ಟೆಂಟ್ ಡ್ರಗ್ಸ್ ಆ್ಯಂಡ್ ಅಲೈಡ್ ಕಾಂಪೌಂಡ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಇವರು ರಸಾಯನ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಪ್ರೊ.ಬಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಲಿಖಿತ ಮಂಗಳೂರು ವಿವಿಯ ವಿಶ್ರಾಂತ ಸಹಾಯಕ ಕುಲಸಚಿವ ಯು.ಗೋಪಾಲ್ ಮತ್ತು ಚಂದ್ರಕಲಾ ದೇವಾಡಿಗ ಅವರ ಪುತ್ರಿ, ಹಾಗು ಮಣಿಪಾಲದ ಮಾಹೆಯ ಪ್ರಾದ್ಯಾಪಕ ಪ್ರವೀಣ್ ಕುಮಾರ್ ಅವರ ಪತ್ನಿ.
Next Story





