ಕೆಲವೇ ಮಂದಿಗೆ ಸೀಮಿತವಾದ ವಾರಾಂತ್ಯ ಕರ್ಫ್ಯೂ: ಸವಿತಾ ಸಮಾಜ ಟೀಕೆ
ಉಡುಪಿ, ಜ.8: ಕೊರೋn ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜನಸಂದಣಿ ಆಗದ ಸೆಲೂನ್, ಪಾರ್ಲರ್, ಚಪ್ಪಲಿ, ಬಟ್ಟೆ, ಫ್ಯಾನ್ಸಿ, ಚಿನ್ನ ದಂಗಡಿ, ಮೊಬೈಲ್, ಟೈಲರ್, ಗ್ಯಾರೇಜ್ ಹೀಗೆ ಕೆಲವೇ ವರ್ಗಗಳಿಗೆ ಸೀಮಿತ ವಾಗಿ ಅವೈಜ್ಞಾನಿಕ ವಾರಂತ್ಯ ಕರ್ಫ್ಯೂ ವಿಧಿಸಿ ಜನರ ಆಕ್ರೋಶ ಹಾಗೂ ನಗೆಪಾಟಲಿಗೀಡಾಗಿದೆ. ಅದೇ ಜನಸಂದಣಿ ಜಾಸ್ತಿ ಇರುವ ಬಸ್, ರೈಲು, ಮ್ಯಾಕ್ಸಿ ಕ್ಯಾಬ್, ಆಟೋ ದಿನಸಿ, ತರಕಾರಿ, ಬೀದಿ ಬದಿ ವ್ಯಾಪಾರ ನಿರ್ದಿಷ್ಟ ಸಮಯವನ್ನು ನಿಗದಿಪಡಿಸದೆ ಬೇಕಾದಷ್ಟು ವ್ಯವಹಾರ ಮಾಡಲು ಅವಕಾಶ ಕಲ್ಪಿಸಿದೆ. ಇದು ಯಾವ ನ್ಯಾಯ? ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಪ್ರಶ್ನಿಸಿದ್ದಾರೆ.
ಈ ಬಾರಿ ಸರಕಾರದ ಸ್ಪಷ್ಟವಾದ ನಿಯಮಗಳು ಇಲ್ಲದೆ ಜನರು ಗೊಂದಲ ಕ್ಕೀಡಾಗಿದ್ದಾರೆ. ಈ ರೀತಿಯ ಕಾನೂನನ್ನು ರೂಪಿಸಿ ಕರೋನಾ ನಿಯಂತ್ರಿಸಲು ಸರಕಾರಕ್ಕೆ ಸಲಹೆ ಕೊಟ್ಟ ತಜ್ಞರು ಯಾರು? ಕಳೆದೆರಡು ಬಾರಿ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇವಲ 5000 ರೂ., ಮತ್ತೊಮ್ಮೆ 2000ರೂ ಅದು ಕೆಲವರಿಗೆ ಮಾತ್ರ ಪರಿಹಾರ ನೀಡಿದೆ. ಇನ್ನಾದರೂ ಸರಕಾರ ಎಚ್ಚೆತ್ತು ಈ ಬಡಪಾಯಿ ಜನರ ಪ್ರಾಣ ಹಿಂಡುವುದನ್ನು ಬಿಟ್ಟು ವೈಜ್ಞಾನಿಕ ರೀತಿಯಲ್ಲಿ ಕರೋನಾ ನಿಯಂತ್ರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







