ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ

ಮಂಗಳೂರು, ಜ.8: ಶಿಕ್ಷಣ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗೈದ ಹಿರಿಯ ಶಿಕ್ಷಕ ದಂಪತಿಗಳಾದ ಬಿ. ಶ್ರೀನಿವಾಸ ರಾವ್-ಸಾವಿತ್ರಿ ಎಸ್. ರಾವ್ ದಂಪತಿಗೆ ಬೈಕಾಡಿ ಪ್ರತಿಷ್ಠಾನದ ವತಿಯಿುಂದ 2021- 22ನೇ ಸಾಲಿನ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಯನ್ನು ಅವರ ಸ್ವಗೃಹದಲ್ಲಿ ನೀಡಲಾಯಿತು. ಹಿರಿಯ ಸಾಹಿತಿ, ಚಿಂತಕಿ ಬಿ.ಎಂ. ರೋಹಿಣಿ ಪ್ರಶಸ್ತಿ ಪ್ರದಾನ ಮಾಡಿದರು.
ಅತಿಥಿಗಳಾಗಿ ಸ್ವಾಮಿ ಏಕಗಮ್ಯಾನಂದಜೀ ಭಾಗವಹಿಸಿದ್ದರು. ದಾಮೋದರ್ ಚೆಟ್ಟಿಯಾರ್ ಸಾಧಕ ದಂಪತಿಯ ಪರಿಚಯ ಮಾಡಿದರು. ದಂಪತಿಯ ಶಿಷ್ಯೆ ಜ್ಯೇಷ್ಠಲಕ್ಷ್ಮಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕ ದಂಪತಿಯ ಕೊಡುಗೆಯನ್ನು ಸ್ಮರಿಸಿದರು.
ಮಾಧುರಿ ಶ್ರ್ರಿರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ರತ್ನಾವತಿ ಜೆ ಬೈಕಾಡಿ, ಅಕ್ಷತಾ ಬೈಕಾಡಿ, ಭರತ್ ರಾಜ್ ಬೈಕಾಡಿ, ರೇಖಾ ಬಿ. ಬೈಕಾಡಿ ಉಪಸ್ಥಿತರಿದ್ದರು.
Next Story





