ಮಂಗಳೂರು: ಪೊಲೀಸ್ ಠಾಣೆಯಲ್ಲಿರುವ ವಾಹನದ ನಂಬರ್ ಹಾಕಿಸಿಕೊಂಡು ಕಳವು

ಮಂಗಳೂರು, ಜ.8: ನಗರದ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಕೆ.ಎ.19 ಎಚ್‌ಡಿ 6497 ನಂಬರ್‌ನ ದ್ವಿಚಕ್ರ ವಾಹನ ಬಾಕಿಯಾಗಿದೆ.
ಈ ವಾಹನದ ನಂಬರ್‌ನ್ನು ಓರ್ವ ವ್ಯಕ್ತಿಯು ಬೇರೊಂದು ವಾಹನಕ್ಕೆ ಹಾಕಿಕೊಂಡು ತಿರುಗಾಡುತ್ತಿದ್ದಾನೆ. ಅಲ್ಲದೆ ನಗರದ ಮಾಲ್ ಒಂದರ ಪಾರ್ಕಿಂಗ್ ನಿಂದ 2 ಹೆಲ್ಮೆಟ್‌ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಈ ನಂಬರ್‌ನ ಹೋಂಡಾ ಆ್ಯಕ್ಟಿವಾ ವಾಹನ ಎಲ್ಲಿಯಾದರೂ ಕಂಡು ಬಂದರೆ ತಕ್ಷಣ ಬಂದರ್ ಪೊಲೀಸ್ ಠಾಣೆಗೆ (ದೂ.ಸಂ: 0824-2220516, ಮೊ.ಸಂ: 9480805338) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story





