ಪ್ರಧಾನಿ ಭೇಟಿ ವೇಳೆ ಭದ್ರತಾಲೋಪ ಪ್ರಕರಣ: ಫಿರೋಝ್ ಪುರ ಹಿರಿಯ ಎಸ್ಪಿ ವರ್ಗಾವಣೆ

pti photo
ಫಿರೋಝ್ ಪುರ್: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಭದ್ರತಾ ಲೋಪ ಉಂಟಾದ ಕೆಲವೇ ದಿನಗಳಲ್ಲಿ ಫಿರೋಝ ಪುರ್ ನಗರದ ಹಿರಿಯ ಎಸ್ಪಿ ಅವರನ್ನು ವರ್ಗಾಯಿಸಲಾಗಿದೆ ಎಂದು India Today ವರದಿ ಮಾಡಿದೆ.
ಹಿರಿಯ ಐಪಿಎಸ್ ಅಧೀಕಾರಿ ಹರ್ಮಾನ್ದೀಪ್ ಸಿಂಗ್ ಹಂಸ್ ಅವರನ್ನು ಇದೀಗ ಭಾರತೀಯ ಮೀಸಲು ಪಡೆಯ 3ನೆ ಬೆಟಾಲಿಯನ್ಗೆ ಕಮಾಂಡಂಟ್ ಆಗಿ ನಿಯೋಜಿಸಲಾಗಿದೆ. ಫಿರೋಝ್ ಪುರ್ ನಗರದ ನೂತನ ಸೀನಿಯರ್ ಎಸ್ಪಿಯಾಗಿ ನರಿಂದರ್ ಭಾರ್ಗವ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ಆದೇಶ ತಿಳಿಸಿದೆ.
ಪ್ರಧಾನಿ ಭದ್ರತಾ ವ್ಯವಸ್ಥೆ ನ್ಯೂನತೆಗಳ ಬಗ್ಗೆ ವಿಚಾರಣೆ ನಡೆಸಲು ಗೃಹ ಸಚಿವಾಲಯವು ರಚಿಸಿದ್ದ ತ್ರಿಸದಸ್ಯ ಸಮಿತಿಯ ಮುಂದೆ ಹರ್ಮಾನ್ದೀಪ್ ಮತ್ತು ಇತರ ಹಿರಿಯ ಪೊಲೀಸ್ ಮತ್ತು ಸಿವಿಲ್ ಅಧಿಕಾರಿಗಳು ಶುಕ್ರವಾರ ಹಾಜರಾಗಿದ್ದರು.
ಭದ್ರತಾ ಲೋಪದ ಕುರಿತಂತೆ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಪಂಜಾಬ್ ಅಧಿಕಾರಿಗಳನ್ನು ವಿಚಾರಣೆಗೆ ಕರೆಸುತ್ತದೆ ಎಂದು ವರದಿಯಾಗಿತ್ತು.
Next Story





