ನಕಲಿ ನಂದಿನಿ ತುಪ್ಪ ತಯಾರಿಕಾ ಜಾಲ ಪತ್ತೆ ಪ್ರಕರಣ: ಸಗಟು ಮಾರಾಟ ಏಜೆನ್ಸಿ ವಿರುದ್ಧ ಎಫ್ಐಆರ್

ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ (ಡಿ.16)
ಬೆಂಗಳೂರು, ಜ.9: ಮೈಸೂರಿನಲ್ಲಿ ಕಲಬೆರಕೆ ನಂದಿನಿ ತುಪ್ಪ ತಯಾರಿಕಾ ಜಾಲ ಪತ್ತೆ ಪ್ರಕರಣ ಸಂಬಂಧ ಕಲಬೆರಕೆ ಜಾಲಕ್ಕೆ ತುಪ್ಪ ಪೂರೈಸಿದ್ದ ಆರೋಪದಡಿ ಬೆಂಗಳೂರಿನ ಸಗಟು ಮಾರಾಟ ಏಜೆನ್ಸಿಯೊಂದರ ವಿರುದ್ಧ ಇಲ್ಲಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಸಗಟು ಮಾರಾಟ ಏಜೆನ್ಸಿ ಶೃತಿ ಮಾರ್ಕೆಟಿಂಗ್ ಕಾರ್ಪೊರೇಷನ್ನಿಂದ ತುಪ್ಪ ಪೂರೈಕೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಈ ಏಜೆನ್ಸಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ, ಇತ್ತೀಚೆಗೆ ಮೈಸೂರಿನಲ್ಲಿ ಕಲಬೆರಕೆ ತುಪ್ಪ ತಯಾರಿಕಾ ಜಾಲ ಪತ್ತೆಯಾದ ಬಳಿಕ ಕೆಎಂಎಫ್ ಎಚ್ಚೆತ್ತುಕೊಂಡಿದ್ದು, ಪ್ರಕರಣದ ಪರಿಶೀಲನೆಗಾಗಿ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
Next Story





