ಟ್ವೆಕಾಂಡೋ ಚಾಂಪಿಯನ್ ಶಿಪ್ : ದ.ಕ. ಜಿಲ್ಲೆಯ ಪಟುಗಳಿಗೆ ಚಿನ್ನ, ಬೆಳ್ಳಿ ಪದಕ

ಮಂಗಳೂರು : ಊಟಿ ಯಲ್ಲಿ ಇತ್ತೀಚೆಗೆ ನಡೆದ 8ನೇ ಸ್ಟಾರ್ ಅವಾರ್ಡ್ ಊಟಿ ರಾಷ್ಟ್ರ ಮಟ್ಟದ ಓಪನ್ ಟೇಕ್ವಾಂಡೋ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಕ್ಯೊರೊಗಿ (ಫೈಟಿಂಗ್) ಹಾಗೂ ಕಲರ್ ಬೆಲ್ಟ್ ಪೊಂಸೆ ವಿಭಾಗದಲ್ಲಿ ಅಯಾ ವಯಸ್ಸಿನ ತೂಕ ವಯೊಮಿತಿಯಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸಿದ ದಕ್ಷಿಣ ಕನ್ನಡ ಟೇಕ್ವಾಂಡೋ ಪಟುಗಳು 16 ಚಿನ್ನ, 8 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಮಿನಿ ಸಬ್- ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ಮುರೈಝ್ ಅಲೀ, ಪೊಂಸೆ ವಿಭಾಗದಲ್ಲಿ ಬೆಳ್ಳಿ ಹಾಗೂ ಫೈಟಿಂಗ್ ವಿಭಾಗದಲ್ಲಿ ಚಿನ್ನ , ಮುಹಮ್ಮದ್ ರಿಹಾಮ್ ಘನಿ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೊಂಸೆ ವಿಭಾಗದಲ್ಲಿ ಬೆಳ್ಳಿ, ಮುಹಮ್ಮದ್ ರಾಹಿಫ್ ಫೈಟಿಂಗ್ ವಿಭಾಗದಲ್ಲಿ ಚಿನ್ನ, ಸಬ್-ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ಸಿಮಾಕ್ ಅಲೀ 38 ಕೆಜಿ ವಲಯ ಮಿತಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ, ಪೊಂಸೆ ಯಲ್ಲಿ ಬೆಳ್ಳಿ , ಮುಹಮ್ಮದ್ ಮುಸ್ತಫಾ 31ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ, ಕಾಲರ್ ಬೆಲ್ಟ್ ಪೊಂಸೆ ಯಲ್ಲಿ ಬೆಳ್ಳಿ , ಮುಹಮ್ಮದ್ ಶಯಾನ್ 27 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಬೆಳ್ಳಿ ಹಾಗೂ ಕಾಲರ್ ಬೆಲ್ಟ್ ಪೊಂಸೆ ಯಲ್ಲಿ ಚಿನ್ನ, ಕೆಡೆಟ್ ವಿಭಾಗದಲ್ಲಿ ಮುಹಮ್ಮದ್ ಪೈಝಲ್ ಕಾಲರ್ ಬೆಲ್ಟ್ ಪೊಂಸೆ ಯಲ್ಲಿ ಚಿನ್ನ, 39 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಬೆಳ್ಳಿ , ಮುಹಮ್ಮದ್ ಮಿಶಾಲ್ 51ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ, ಪೊಂಸೆ ಯಲ್ಲಿ ಬೆಳ್ಳಿ , ಮುಹಮ್ಮದ್ ಅಯಾನ್
56ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ, ಪೊಂಸೆ ಯಲ್ಲಿ ಚಿನ್ನ, ಮುಹಮ್ಮದ್ ಹಿಶಾಮ್ 36 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಬೆಳ್ಳಿ,
ಮುಹಮ್ಮದ್ ನಿಹಾಲ್ ನಝೀರ್ 47ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ , ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ತನ್ವೀರ್
51 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ ಹಾಗು ಮಹಿಳೆಯರ ವಿಭಾಗದ ಫಾತಿಮ ಮುಸ್ಕಾನ್ 48 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ , ಸೀನಿಯರ್ ವಿಭಾಗ ದಲ್ಲಿ ಯೂಸುಫ್ ಹಫೀಝ್ 56ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ , ಮುಹಮ್ಮದ್ ಶಹಬಾನ್
68 ಕೆಜಿ ವಿಭಾಗದ ಫೈಟಿಂಗ್ ನಲ್ಲಿ ಚಿನ್ನ , ಮುಹಮ್ಮದ್ ಶಿರ್ಹಾನ್ ಓವರ್ 80ಕೆಜಿ ವಿಭಾಗದಲ್ಲಿ ಚಿನ್ನ ಪಡೆದಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ತರಬೇತಿ ಕೇಂದ್ರಗಳಾಗಿರುವ ಪಾಣೆಮಂಗಳೂರಿನ ಫಿಟ್ಟೆಸ್ ಮಲ್ಟಿ ಜಿಂ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರ್ ಹಾಗೂ ಎಕ್ಟ್ರೀಂ ಫೈಟ್ ಕ್ಲಬ್ ಸುರತ್ಕಲ್ ಕೇಂದ್ರದಲ್ಲಿ ಟ್ವೆಕಾಂಡೋ ತರಬೇತಿಯನ್ನು ಪಡೆದಿದ್ದು, ಜಿಲ್ಲಾ ಮುಖ್ಯ ಟ್ವೆಕಾಂಡೋ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ತರಬೇತಿ ನೀಡಿದ್ದರು.





