ಮಳಲಿಪೇಟೆ ಮಸೀದಿಯಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ

ಮಂಗಳೂರು, ಜ.9:ಮಳಲಿಪೇಟೆ ಜುಮಾ ಮಸೀದಿ ಮತ್ತು ಮಅದನುಲ್ ಉಲೂಂ ಮದ್ರಸ ಇದರ 60ನೆ ವಾರ್ಷಿಕೋತ್ಸವ ಹಾಗೂ ಸನಸ್ತ ಅಂಗೀಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ನೂರೇ ಅಜ್ಮೀರ್ (ಆಧ್ಯಾತ್ಮಿಕ ಸಂಗಮ) ಕಾರ್ಯಕ್ರಮವು ಇತ್ತೀಚೆಗೆ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನಡೆಯಿತು.
ಅಡ್ಡೂರು ಜುಮಾ ಮಸೀದಿಯ ಖತೀಬ್ ಸ್ವದಕತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಮಾಮು ಮಣೇಲ್ ಧ್ವಜಾರೋಹಣಗೈದರು. ವೌಲಿದ್ ಪಾರಾಯಣದ ನೇತೃತ್ವವನ್ನು ಮುದರ್ರಿಸ್ ಮುಹಮ್ಮದ್ ತಾಜುದ್ದೀನ್ ರಹ್ಮಾನಿ ವಹಿಸಿದ್ದರು. ಮಿತ್ತಬೈಲ್ ಇರ್ಶಾದ್ ದಾರಿಮಿ ದುಆಗೈದರು. ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಮಸೀದಿಯ ಗೌರವಾಧ್ಯಕ್ಷ ಮಾಮು ಹಾಜಿ, ಮಸೀದಿ ನವೀಕರಣ ಸಮಿತಿಯ ಅಧ್ಯಕ್ಷ ಹಾಜಿ ಯೂಸುಫ್, ಪದಾಧಿಕಾರಿಗಳಾದ ಹಾಜಿ ಎಂ.ಎಚ್. ಮೊಯಿದ್ದೀನ್, ನೌಷಾದ್ ಹಾಜಿ, ಜಮಾಲುದ್ದೀನ್ ದಾರಿಮಿ, ಎಂ.ಎ. ಅಬೂಬಕರ್, ಎಂ.ಎಸ್ ಶೇಖಬ್ಬ, ಬಿ. ಝಕರಿಯಾ, ಬಶೀರ್ ಫ್ಲವರ್ ಕೈಕಂಬ, ಅಬ್ದುಲ್ ಹಮೀದ್, ಆದಂ ಕುಕ್ಕಟ್ಟೆ, ಹಮೀದ್ ಸಖಾಫಿ, ಹಂಝ ಲತೀಫಿ, ಅಬ್ಬಾಸ್ ನಾಡಜೆ, ಬಸರಿಯ, ಎಂ.ಎ.ಮುಹಮ್ಮದ್, ಅಬ್ದುಲ್ ಹಮೀದ್, ಎಂ.ಎ. ಮುಹಮ್ಮದ್ ರಝಾಕ್, ಮುಹಮ್ಮದ್ ಇಂಜಿನಿಯರ್, ಹಸ್ಮತ್ ಅಲಿ, ಅಬ್ದುಲ್ ಅಝೀಝ್, ಇಸ್ಮಾಯೀಲ್, ಕೆ.ಎಚ್.ಉಸ್ಮಾನ್, ಎ.ಕೆ.ಅಶ್ರಫ್, ಅಬ್ದುಲ್ ರಶೀದ್, ಇಬ್ರಾಹೀಂ ಕುಕ್ಕಟ್ಟೆ, ಕೋಯ ಅಬ್ದುಲ್ ರಹ್ಮಾನ್ ಉಸ್ತಾದ್ ಮಳಲಿ, ಕೆ. ಮಯ್ಯದ್ದಿ, ಅಬ್ದುಲ್ ರಝಾಕ್, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಅಬ್ದುಲ್ ಖಾದರ್ ಯಮಾನಿ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಮಸೀದಿ ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಸರ್ಫ್ರಾಝ್ ವಂದಿಸಿದರು.







