Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫಿರೋಝ್‌ ಪುರ ಭದ್ರತಾ ವೈಫಲ್ಯ: ಎಫ್ಐಆರ್‌...

ಫಿರೋಝ್‌ ಪುರ ಭದ್ರತಾ ವೈಫಲ್ಯ: ಎಫ್ಐಆರ್‌ ನಲ್ಲಿ ಪ್ರಧಾನಿ ಮೋದಿಯವರ ಉಲ್ಲೇಖವಿಲ್ಲ; ವರದಿ

ವಾರ್ತಾಭಾರತಿವಾರ್ತಾಭಾರತಿ9 Jan 2022 11:08 PM IST
share
ಫಿರೋಝ್‌ ಪುರ ಭದ್ರತಾ ವೈಫಲ್ಯ: ಎಫ್ಐಆರ್‌ ನಲ್ಲಿ ಪ್ರಧಾನಿ ಮೋದಿಯವರ ಉಲ್ಲೇಖವಿಲ್ಲ; ವರದಿ

ಹೊಸದಿಲ್ಲಿ,  ಜ.9: ಪ್ರಧಾನಿ ನರೇಂದ್ರ ಮೋದಿಯವರು ಜ.5ರಂದು ಪಂಜಾಬಿಗೆ ಭೇಟಿ ನೀಡಿದ್ದ ಸಂದರ್ಭ ಉಂಟಾಗಿತ್ತೆನ್ನಲಾದ ಭದ್ರತಾ ವೈಫಲ್ಯದ ಕುರಿತು ಫಿರೋಝ್ಪುರದ ಕುಲಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಹಲವಾರು ಲೋಪಗಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯು ಜ.5ರಂದು ನಡೆದಿತ್ತಾದರೂ ಜನರಲ್ ಡೈರಿ ಉಲ್ಲೇಖವನ್ನು ಜ.6ರಂದಷ್ಟೇ ದಾಖಲಿಸಲಾಗಿತ್ತು. ನಂತರ ಇನ್ಸ್ಪೆಕ್ಟರ್ ಬಲಬೀರ್ ಸಿಂಗ್ ಅವರ ದೂರಿನ ಮೇರೆಗೆ ಎಫ್ಐಆರ್ ಸಲ್ಲಿಸಲಾಗಿತ್ತು. ಆದರೆ ಎಫ್ಐಆರ್ನಲ್ಲಿ ಪ್ರಧಾನಿಯವರ ಬೆಂಗಾವಲು ವಾಹನಗಳನ್ನು ಉಲ್ಲೇಖಿಸಲಾಗಿಲ್ಲ. ತಾನು ಅಪರಾಹ್ನ 2:30 ಮತ್ತು 3ರ ನಡುವೆ ಫಿರೋಝ್ಪುರ-ಮೋಗಾ ರಸ್ತೆಯ ಪ್ಯಾರಿಯಾನಾ ಫ್ಲೈಓವರ್ನಲ್ಲಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ ಎಂದು ಬಲಬೀರ್ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅಪರಾಹ್ನ 3:20ರ ವೇಳೆಗೆ ಪ್ರಧಾನಿಯವರು ಬಠಿಂಡಾದಿಂದ ದಿಲ್ಲಿಗೆ ನಿರ್ಗಮಿಸಿದ್ದರು ಎನ್ನುವುದನ್ನು ಉಲ್ಲೇಖಿಸುವುದು ಅಗತ್ಯವಾಗಿತ್ತು. ವರದಿಗಳು ತಿಳಿಸಿರುವಂತೆ ಮೋದಿಯವರ ವಾಹನಗಳ ಸಾಲು ಅಪರಾಹ್ನ 1:15ರಿಂದ 1:35ರವರೆಗೆ ಫ್ಲೈಓವರ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಈ ನಡುವೆ 150 ಅಪರಿಚಿತ ವ್ಯಕ್ತಿಗಳನ್ನು ಎಫ್ಐಆರ್ನಲ್ಲಿ ಹೆಸರಿಸಿರುವ ಬಲಬೀರ್ ಅವರ ವಿರುದ್ಧ ಐಪಿಸಿಯ 283 ಕಲಮ್ನಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಕೆಲವು ಅಪರಿಚಿತ ವ್ಯಕ್ತಿಗಳು ಫ್ಲೈಓವರ್ನಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ ಮತ್ತು ಅದರಿಂದಾಗಿ ಫಿರೋಜ್ಪುರ ರ್ಯಾಲಿಗೆ ತೆರಳುತ್ತಿದ್ದ ಕೆಲವು ವಾಹನಗಳು ಮತ್ತು ಕೆಲವು ವಿಐಪಿಗಳ ಕಾರುಗಳು ಸಿಕ್ಕಿಹಾಕಿಕೊಂಡಿದ್ದವು ಎನ್ನುವುದು ಬಲಬೀರ್ಗೆ ತಿಳಿದಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಎಫ್ಐಆರ್ನಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಲಾಗಿಲ್ಲ. ಐಪಿಸಿ 283ರಡಿ ಕೇವಲ 200 ರೂ.ದಂಡವನ್ನು ವಿಧಿಸಲಾಗುತ್ತದೆ ಮತ್ತು ಆರೋಪಿಗೆ ಜಾಮೀನು ನೀಡಬಹುದಾಗಿದೆ. ಇದು ಪಂಜಾಬ ಸರಕಾರದ ಪಿತೂರಿಯನ್ನು ಬೆಟ್ಟು ಮಾಡುತ್ತಿದೆ ಎಂದು ಹೇಳಿದ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಅವರು, ಪ್ರತಿಭಟನಾಕಾರರ ವೀಡಿಯೊಗಳು ವೈರಲ್ ಆಗಿರುವಾಗ ಮತ್ತು ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿರುವಾಗ ಅವರು ಅಪರಿಚಿತರಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
‌
ಬಿಕೆಯು ಕ್ರಾಂತಿಕಾರಿ ಮನವಿ

ಪ್ರಧಾನಿಯವರ ವಾಹನಗಳ ಸಾಲನ್ನು ತಡೆಗಟ್ಟಿದ್ದ ಮತ್ತು ಅಂತಿಮವಾಗಿ ಅದು ವಾಪಸಾಗುವುದನ್ನು ಅನಿವಾರ್ಯವಾಗಿಸಿದ್ದ ಜ.5ರ ಪ್ರತಿಭಟನೆಯ ಹೊಣೆಗಾರಿಕೆಯನ್ನು ಬಿಕೆಯು-ಕ್ರಾಂತಿಕಾರಿ ಈ ಹಿಂದೆಯೇ ವಹಿಸಿಕೊಂಡಿತ್ತು. ಜ.5ರ ವೀಡಿಯೊ ಸಂದೇಶವೊಂದರಲ್ಲಿ ಬಿಕೆಯು-ಕ್ರಾಂತಿಕಾರಿಯ ಅಧ್ಯಕ್ಷ ಸುರ್ಜೀತ್ ಸಿಂಗ್ ಪೂಲ್ ಅವರು ಯೂನಿಯನ್ ಸದಸ್ಯರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದರು. 

ಶುಕ್ರವಾರ ರಾತ್ರಿ ಇನ್ನೊಂದು ವೀಡಿಯೊವನ್ನು ಬಿಡುಗಡೆಗೊಳಿಸಿರುವ ಫೂಲ್,‘ನಾವು ಪ್ರತಿಭಟನೆಯನ್ನು ನೇರ ಪ್ರಧಾನಿಯ ಬಳಿಗೇ ಕೊಂಡೊಯ್ದಿದ್ದೇವೆ. ಆದರೆ ಈಗ ನಮ್ಮ ಯೂನಿಯನ್ ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ನಮಗೆ ನೆರವಾಗುವಂತೆ ನಾವು ಭಾರತದಲ್ಲಿನ ಮತ್ತು ವಿದೇಶಗಳಲ್ಲಿನ ಪ್ರತಿಯೊಬ್ಬರನ್ನೂ ಕೋರಿಕೊಳ್ಳುತ್ತಿದ್ದೇವೆ. ನಮ್ಮ ಹೋರಾಟದ ಸಂದರ್ಭ ಸಂಗ್ರಹಿಸಲಾಗಿದ್ದ ಹಣ ಖರ್ಚಾಗಿದೆ. ಈಗ ಇನ್ನೊಂದು ಹೋರಾಟವನ್ನು ನಾವು ಎದುರಿಸಬೇಕಿದ್ದು,ಅದಕ್ಕೆ ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X