Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸರಳ ಕನ್ನಡವನ್ನು ಹೇರಿಕೊಳ್ಳುವ ಮುನ್ನ

ಸರಳ ಕನ್ನಡವನ್ನು ಹೇರಿಕೊಳ್ಳುವ ಮುನ್ನ

ವಿಶ್ವಾಂಬರ, ತುಮಕೂರುವಿಶ್ವಾಂಬರ, ತುಮಕೂರು9 Jan 2022 11:37 PM IST
share

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ‘ಎಲ್ಲರ ಕನ್ನಡ’ದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಕೆಲವರು ಈ ಬಗ್ಗೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಸರಳಗನ್ನಡ, ಎಲ್ಲರು ಕನ್ನಡ ಭಾಷೆಯನ್ನು ಉಪಯೋಗಿಸುವ ವಿಚಾರ ನಿಜಕ್ಕೂ ಒಳ್ಳೆಯ ವಿಷಯವಾಗಿದೆ. ಇದರ ಉದ್ದೇಶ, ಸಂವಹನ ಇನ್ನಷ್ಟು ಸುಲಭವಾಗಬೇಕು ಎನ್ನುವುದಾಗಿರಬೇಕು. ಆದುದರಿಂದ, ಸರಳ ಪದದ ಅನ್ವೇಷಣೆಯಲ್ಲಿ ಕನ್ನಡವನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದರೆ, ಅಳಿದುಳಿದ ಕನ್ನಡದ ಆಸಕ್ತಿಯೂ ಜನರಿಂದ ಹೊರಟು ಹೋಗಬಹುದು.

ಮುಖ್ಯವಾಗಿ, ಕೆಲವು ಕನ್ನಡ ಪಂಡಿತರು ತಮ್ಮ ವಿಮರ್ಶೆ, ಸಂಶೋಧನೆಗಳಲ್ಲಿ ಬಳಸುವ ಪಾರಿಭಾಷಿಕ ಶಬ್ದಗಳಿಗೆ ಸರಳಗನ್ನಡ ಪದಗಳನ್ನು ಹುಡುಕುವ ಕೆಲಸ ನಡೆದರೆ ಒಳ್ಳೆಯದು. ಇಂದಿಗೂ ಕನ್ನಡದ ಮಹತ್ವದ ವಿಮರ್ಶಕರು, ಚಿಂತಕರ ಕನ್ನಡ ಜನಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ. ನವ್ಯ ಸಾಹಿತ್ಯ ಕಾಲದಲ್ಲಿ, ಪ್ರತಿ ಕವಿಯೂ ಒಬ್ಬ ಪುರೋಹಿತ ವಿಮರ್ಶಕನನ್ನು ಇಟ್ಟುಕೊಂಡಿದ್ದ. ಮತ್ತು ಆತನ ಮೊಹರು ಒತ್ತಿದ ಬಳಿಕವಷ್ಟೇ ಕನ್ನಡ ಸಾಹಿತ್ಯ ಅದನ್ನು ಒಪ್ಪಿಕೊಳ್ಳುವಂತಹ ಸನ್ನಿವೇಶವಿತ್ತು. ಕನ್ನಡ ವಿದ್ವಾಂಸರ ಮೇಲರಿಮೆ ಅಳಿಯಬೇಕು. ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳಗನ್ನಡವೊಂದು ರೂಪುಗೊಳ್ಳುವ ಅನಿವಾರ್ಯತೆ ಇದೆ. ಹಾಗೆಂದು, ಒಬ್ಬರಿಗೆ ಸರಳ ಗನ್ನಡವಾಗಿ ಭಾಸವಾದುದು, ಕರ್ನಾಟಕದ ಇನ್ನೊಂದು ಭಾಗದವರಿಗೆ ಅಪರಿಚಿತ ಶಬ್ದವೇ ಆಗಿರಬಹುದು. ಆಗ ಏನು ಮಾಡಬೇಕು? ಸರಳ ಗನ್ನಡದಿಂದ ನಮ್ಮ ಸಂವಹನ ಇನ್ನಷ್ಟು ಸರಳ, ಸಲೀಸು ಆಗದೇ ‘ಬದಲಾವಣೆಗಾಗಿ ಬದಲಾವಣೆ’ ಅಥವಾ ‘ಸಂಸ್ಕೃತದ ಮೇಲಿನ ದ್ವೇಷಕ್ಕಾಗಿ ಬಲವಂತದ ಬದಲಾವಣೆ’ಯಾದರೆ ಯಾರಿಗೆ ಪ್ರಯೋಜನ? ಮಹಾಪ್ರಾಣಗಳನ್ನು ಏಕಾಏಕಿ ತೆಗೆದುಹಾಕಿದರೆ ಅದು ಹತ್ತು ಹಲವು ಭಾಷಾಗೊಂದಲಗಳನ್ನು ಹುಟ್ಟಿಸಿ ಹಾಕಲಿದೆ. ಮಹಾಪ್ರಾಣಗಳು ಈವರೆಗೆ ಕನ್ನಡ ಭಾಷೆಗೆ ಪೂರಕವಾಗಿ ಸಾಕಷ್ಟು ಕೆಲಸ ಮಾಡಿದೆ. ಕನ್ನಡ ಬರಹವನ್ನು ಪೊರೆದಿದೆ. ಏಕಾಏಕಿ ಅದನ್ನು ತೆಗೆದಾಗ ಹುಟ್ಟುವ ಗೊಂದಲಗಳು, ಶ, ಷ ಬಳಕೆಗಳ ಬಗ್ಗೆ ಇರುವ ದ್ವಂದ್ವ ಇವೆಲ್ಲವನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು. ಹಾಗೆಯೇ ಈಗ ಇರುವ ಸಂಸ್ಕೃತದಿಂದ ಬಂದ ಪದವೇ ಹೆಚ್ಚು ಸೂಕ್ತವೆನಿಸಿರುವಾಗ, ಅನಗತ್ಯವಾಗಿ ಹೊಸ ಪದವನ್ನು ಅಲ್ಲಿ ತಂದು ಕೂರಿಸುವುದು ಎಷ್ಟು ಸರಿ? ಸರಳಗನ್ನಡವನ್ನು ಬಲವಂತವಾಗಿ ಹೇರಿಕೊಂಡಾಗ ಅದುವೇ ಜಟಿಲಗನ್ನಡವಾಗಿ ಕನ್ನಡ ಭಾಷೆಗೆ ಸಮಸ್ಯೆಯಾಗಿ ಕಾಡಬಹುದು.
 

share
ವಿಶ್ವಾಂಬರ, ತುಮಕೂರು
ವಿಶ್ವಾಂಬರ, ತುಮಕೂರು
Next Story
X